Breaking
20 Sep 2026, Sun

ದೈವದ ಕೋಲಕ್ಕೆ ಬಣ್ಣ ಹಚ್ಚಿದ 11 ವರ್ಷದ ಬಾಲಕ

ಅಜೆಕಾರು: 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ.

ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮ ಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ ಸಮರ್ಥ್(11) ಎಂಬ ಬಾಲಕ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಕೋಲ ನಿರ್ವಹಿಸಿದ್ದಾನೆ.

ಹೆಸರಾಂತ ದೈವ ಕಲಾವಿದ ದಿ। ಮೋನು ಪಾಣಾರ ಶಿರ್ಲಾಲು ಇವರ ಮೊಮ್ಮಗನಾಗಿರುವ ಸಮರ್ಥ್, ಅಜ್ಜ ಕಟ್ಟುತ್ತಿದ್ದ ಕೋಲವನ್ನು ನೋಡುತ್ತಾ ಬೆಳೆದಿದ್ದ.

ಬಾಲಕ ತನ್ನ ತಂದೆ ಹರೀಶ ಅವರ ಮಾರ್ಗದರ್ಶನದಲ್ಲಿ ಸಣ್ಣ ವಯಸ್ಸಿನಲ್ಲೇ ಕೋಲ ಕಟ್ಟಿರುವುದು ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಸಮರ್ಥ್ ಅವರ ಚಿಕ್ಕಪ್ಪ ರಮೇಶ್ ಶಿರ್ಲಾಲು ಅವರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದು, ಅವರೂ ಪ್ರೋತ್ಸಾಹ ನೀಡಿದ್ದಾರೆ.

ಸದ್ಯ ಈ ಬಾಲಕನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *