ಬಂಟ್ವಾಳ : ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರಕ್ತೇಶ್ವರಿ ಯುವಕ ಸಂಘದ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ಸೇವೆಯನ್ನು ನೀಡುತ್ತಾ ಬಂದಿರುವುದು ಸಂತೋಷ ತಂದಿದೆ ಎಂದು ಜೈ ತುಲುನಾಡ್ (ರಿ.) ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಶಿಕ್ಷಕಿ ಪೂರ್ಣಿಮಾ ಬಂಟ್ವಾಳರವರು ತಿಳಿಸಿದರು.
ಅವರು ಶನಿವಾರ ಬೆಳಿಗ್ಗೆ ನಡೆದ ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ರಜತ ಸಂಭ್ರಮದ ಪ್ರಯುಕ್ತ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ತುಳುನಾಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭ ಕುಂಜಿರಾ ಗುರುಸ್ವಾಮಿ, ಮಾಜಿ ಯೋಧ ನಾರಾಯಣ, ಗೌರವಾಧ್ಯಕ್ಷ ಮನೋಹರ್ ನೆರಂಬೋಳು,
ಸಂಘದ ಅಧ್ಯಕ್ಷ ಹರೀಶ ಕುಲಾಲ್, ಸದಸ್ಯರಾದ ಗೋಪಾಲ ಪೂಜಾರಿ, ಹರಿಶ್ಚಂದ್ರ, ಜನಾರ್ದನ ಗಣೇಶ, ದಯಾನಂದ, ಯಶೋಧರ, ಗಣೇಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಗಣಹೋಮ ನಂತರ ಸತ್ಯನಾರಾಯಣ ಪೂಜೆ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




