ಮಂಗಳೂರು: ಶಕ್ತಿನಗರದ ಶಕ್ತಿ ವಸತಿಯುತ ಶಾಲೆಯ ವಿದ್ಯಾರ್ಥಿಯೋರ್ವರು ಉತ್ತರ ಆಫ್ರಿಕಾದ ಟುನಿಶೀಯಾದಲ್ಲಿ ನಡೆದ ‘ಇಂಟರ್‌ನ್ಯಾಷನಲ್ ಫೆಸ್ಟಿವಲ್ ಆಫ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಟೆಕ್ನಾಲಜಿ’ಯಲ್ಲಿ
ವಿಜ್ಞಾನ ಮಾದರಿ ಪ್ರದರ್ಶಿಸಿದ್ದಾರೆ.
ಶಾಸ್ತಾ ನಾಯ್ಕ್ ಅವರು, ತೆಂಗಿನ ಮರದಿಂದ ನೀರಾವನ್ನು ಮಾನವರಹಿತವಾಗಿ ಯಂತ್ರದ ಮೂಲಕ ಇಳಿಸುವ ಪ್ರಾತ್ಯಕ್ಷಿಕೆ ನೀಡಿದರು.
ಜಗತ್ತಿನ 70 ದೇಶಗಳ 1,400 ಪ್ರತಿನಿಧಿಗಳು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ಶಾಸ್ತಾ ನಾಯ್ಕ್,ಭಾರತವನ್ನು ಪ್ರತಿನಿಧಿಸಿದ ಏಕೈಕ ವಿದ್ಯಾರ್ಥಿ ಆಗಿದ್ದರು.
ಚಂದ್ರಿಕಾ ಮತ್ತು ಶ್ರೀನಾಥ್ ನಾಯ್ಕ್ ದಂಪತಿ ಪುತ್ರನ ಈ ಸಾಧನೆಗೆ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆ.ಸಿ.ನಾಯ್ಕ್ ಇತರರು ಅಭಿನಂದನೆ ಸಲ್ಲಿಸಿದ್ದಾರೆ.



