Breaking
22 Mar 2026, Sun

ದೈಗೋಳಿ: ಸಾಯಿ ನಿಕೇತನ ಸೇವಾಶ್ರಮಕ್ಕೆ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ.


ಬಂಟ್ವಾಳ : ಪೇಜಾವರ ಮಠಾಧೀಶ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ ಉದಯ ಕುಮಾರ ನೂಜಿ ದಂಪತಿಗಳು ಅವರನ್ನು ಗೌರವಿಸಿದರು.

ಸ್ವಾಮೀಜಿಯವರು ಆಶ್ರಮದ ಎಲ್ಲ ವಿಭಾಗವನ್ನು ಸಂದರ್ಶಿಸಿ, ನಿವಾಸಿಗಳನ್ನು ಹರಸಿ ಆಶೀರ್ವದಿಸಿದರು. ಇಲ್ಲಿ ನಡೆಯುತ್ತಿರುವ ಕಾರ್ಯ ದೀನರ ಸೇವೆ, ಇದು ರಾಷ್ಟ್ರ ಸೇವೆ. ಇದು ಶ್ರೀ ರಾಮನ ಸೇವೆ, ಶ್ರೀಕೃಷ್ಣನ ಸೇವೆ. ಸೇವೆ ಮಾಡುತ್ತಿರುವ ಈ ಸಂಸ್ಥೆ ದೃಢವಾಗಿ ಬೆಳೆಯಲಿ ಎಂದು ಹರಸಿದರು.

ಅದಕ್ಕೂ ಮೊದಲು ಗೋಶಾಲೆಯ ಎಲ್ಲ ಹಸುಗಳಿಗೆ ಗೋಗ್ರಾಸ ನೀಡಿದರು.

Leave a Reply

Your email address will not be published. Required fields are marked *