Breaking
22 Mar 2026, Sun

ವಿಟ್ಲ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ : ಕೊಡುಗೆಗಳ ಹಸ್ತಾಂತರ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ ಅವರು ಅಧಿಕೃತ ಭೇಟಿ ನೀಡಿ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ (RMSA) ಇದರ ಸಭಾಂಗಣ ದುರಸ್ತಿ ಹಾಗೂ ಇನ್ವರ್ಟರ್ ಕೊಡುಗೆ ನೀಡಿದರು.ಪುನರ್ ನಿರ್ಮಾಣಗೊಂಡ ಮಂಗಲಪದವು ಮತ್ತು ಸಿ ಪಿ ಸಿ ಆರ್ ಐ ಬಳಿಯ ಬಸ್ ತಂಗುದಾಣವನ್ನುಲೋಕಾರ್ಪಣೆಗೊಳಿಸಿದರು.ಸ್ಕೌಟ್ ಎಂಡ್ ಗೈಡ್ಸ್ ಕಚೇರಿಗೆ ಪೀಠೋಪಕರಣ ಕೊಡುಗೆ, ವಿಟ್ಲ ಸಮುದಾಯ ಆಸ್ಪತ್ರೆಗೆ ಐದು ವಾಲ್ ಮೌಂಟ್ ಫ್ಯಾನ್ ಕೊಡುಗೆ, ಚಂದಳಿಕೆ ಶಾಲೆಗೆ ಏಂಪ್ಲಿಫೈರ್ ಕೊಡುಗೆಯನ್ನು ಹಸ್ತಾಂತರಿಸಿದರು.ವಿಟ್ಲ ಆರಕ್ಷಕ ಠಾಣೆಗೆ ಬೋರ್ಡ್ ಅಳವಡಿಕೆ, ಕ್ಷಯ ರೋಗಿಗಳಿಗೆ ಕಿಟ್ ವಿತರಣೆ, ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಮೋನಪ್ಪ ಪೂಜಾರಿ ಮನೆ ನಿರ್ಮಾಣಕ್ಕೆ ಧನಸಹಾಯ, ವಿಠಲ ಸುಪ್ರಜಿತ್ ಐಟಿಐ ಗೆ ಟೂಲ್‌ ಕಿಟ್ ಕೊಡುಗೆ, ಮಂಗಿಲಪದವು ಅಂಗನವಾಡಿಗೆ ಜಾರುಬಂಡಿ ದುರಸ್ತಿ, ಸುರಕ್ಷಾ ಹೆಲ್ತ್ ಸೆಂಟರಲ್ಲಿ ಉಚಿತ ನವಜಾತ ಶಿಶುಗಳ ಶ್ರವಣ ದೋಷ ಪತ್ತೆ ಕಾರ್ಯಕ್ರಮ ಉದ್ಘಾಟನೆ, ಕಾಪುಮಜಲು ಮಲರಾಯ ದೇವಸ್ಥಾನಕ್ಕೆ ಸೋಲಾರ್ ದೀಪ ಅಳವಡಿಕೆ, ಕೋಡಪದವು ಅಂಗನವಾಡಿ ಗೆ ಚಯರ್ ಕೊಡುಗೆ, ಒಕ್ಕೆತ್ತೂರು ಬಸ್ ಸ್ಟಾಂಡ್ ದುರಸ್ತಿ, ಫಿಸಿಯೋಥೆರಪಿ ಘಟಕಕ್ಕೆ ಸ್ಟೀಲ್ ಬೇಸಿನ್ ಅಳವಡಿಕೆ ಮೊದಲಾದ ಶಾಶ್ವತ ಯೋಜನೆಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್ ಹಾಗೂ ಪ್ರಶಸ್ತಿ ವಿಜೇತ ಕೃಷಿಕ ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಗೀತಾ ರಾವ್, ಪಿಡಿಜಿ ಡಾ. ಗೀತಪ್ರಕಾಶ್, ಆರ್ ಸಿ ಪಾವನ್ ರಾಮ್, ಝೆಡ್ ಸಿ ಸುದೇಶ್ ಭಂಡಾರಿ, ಐಪಿಪಿ ಜಲಜಾಕ್ಷಿ ಬಿ. ಗೌಡ, ಲಿಯೋ ಅಧ್ಯಕ್ಷ ಮೋನಿಶ್, ಲಯನ್ಸ್ ಕ್ಲಬ್ ಕೋಶಾಧಿಕಾರಿ ಮನೋಜ್ ರೈ, ಇತರ ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ರಜಿತ್ ಆಳ್ವ ಎರ್ಮೆನಿಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅರವಿಂದ ರೈ ವರದಿ ವಾಚಿಸಿ, ವಂದಿಸಿದರು.

Leave a Reply

Your email address will not be published. Required fields are marked *