Breaking
27 Nov 2026, Fri

ಸಂವಿಧಾನ ದಿನಾಚರಣೆ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಬಿಇಎಂಎಲ್ ಎಸ್‌ಸಿ/ಎಸ್‌ಟಿ ನೌಕರರ ಕಲ್ಯಾಣ ಸಂಘದಿಂದ ಧನ್ಯವಾದ

ಮೈಸೂರು: ಬಿಇಎಂಎಲ್ ಎಸ್‌ಸಿ/ಎಸ್‌ಟಿ ನೌಕರರ ಕಲ್ಯಾಣ ಸಂಘದ ವತಿಯಿಂದ ಆಯೋಜಿಸಲಾದ ಸಂವಿಧಾನ ದಿನಾಚರಣೆ–2026 ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭಾರತದ ಸಂವಿಧಾನದ ಶಿಲ್ಪಿ, ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲಾಯಿತು.

ಸಂಜೆ ಬಿಇಎಂಎಲ್ ಟೌನ್‌ಶಿಪ್‌ನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು, ಸಹೋದ್ಯೋಗಿಗಳು ಹಾಗೂ ಬಿಇಎಂಎಲ್ ಕುಟುಂಬದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರಂಗ ಚಂದ್ರಮ ತಂಡದ ಕಲಾವಿದರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ನಡುವಿನ ಐತಿಹಾಸಿಕ ಪೂನಾ ಒಪ್ಪಂದದ ಕುರಿತಾದ ನಾಟಕವನ್ನು ಪ್ರದರ್ಶಿಸಿದರು. ಕಲಾವಿದರ ಮನೋಜ್ಞ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಅತ್ಯುತ್ತಮ ನಾಟಕ ಪ್ರದರ್ಶನ ನೀಡಿದ ರಂಗ ಚಂದ್ರಮ ತಂಡದ ಕಲಾವಿದರು ಹಾಗೂ ನಿರ್ದೇಶಕ ಜಯಚಂದ್ರ ಅವರಿಗೆ ಸಂಘದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘದ ಸದಸ್ಯರು, ಸಹೋದ್ಯೋಗಿಗಳು, ಬಿಇಎಂಎಲ್ ಕುಟುಂಬದ ಸದಸ್ಯರು, ಸ್ವಯಂಸೇವಕರು ಹಾಗೂ ಹಿತೈಷಿಗಳಿಗೆ ಬಿಇಎಂಎಲ್ ಎಸ್‌ಸಿ/ಎಸ್‌ಟಿ ನೌಕರರ ಕಲ್ಯಾಣ ಸಂಘವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದೆ.

Leave a Reply

Your email address will not be published. Required fields are marked *