Breaking
27 Nov 2026, Fri

ಲೊರೆಟ್ಟೋ ಹಿಲ್ಸ್ : ರೋಟರಿ ಕ್ಲಬ್ ವತಿಯಿಂದ ‘ಪಿಂಕ್ ಆಟೋ ರಿಕ್ಷಾ’ ಹಸ್ತಾಂತರ ಕಾರ್ಯಕ್ರಮ

ಬಂಟ್ವಾಳ: ರೋಟರಿ ಜಿಲ್ಲೆ 3181ರಲ್ಲಿ ಪ್ರಸಕ್ತ ವರ್ಷದ ಮಹಿಳಾ ಸಬಲೀಕರಣ ‘ಸಖಿ’ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗೆ ಈಗಾಗಲೇ ಒಟ್ಟು 16 ‘ಪಿಂಕ್ ಆಟೋ ರಿಕ್ಷಾ’ ವಿತರಿಸಲಾಗಿದೆ. ಆ ಮೂಲಕ ಅವರಲ್ಲಿ ಸ್ವಾಭಿಮಾನದ ಮನೋಭಾವ ಮೂಡಿಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದ್ದಾರೆ.


ಇಲ್ಲಿನ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಅರ್ಹ ಫಲಾನುಭವಿ ವಿನುತಾ ಪಣೋಲಿಬೈಲು ಇವರಿಗೆ ಬುಧವಾರ ಸಂಜೆ ‘ಪಿಂಕ್ ಆಟೋ ರಿಕ್ಷಾ’ ಹಸ್ತಾಂತರಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷೆ ಗೀತಾ ಪಿ.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಗವರ್ನರ್ ಶ್ರುತಿ ಮಾಡ್ತಾ ಮಾತನಾಡಿ, ‘ ಇದೊಂದು ನಮ್ಮ ಕನಸಿನ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಇತರರಿಗೆ ಮಾದರಿಯಾಗಿ ಬೆಳೆಸುವ ಪ್ರಯತ್ನವಾಗಿದೆ’ ಎಂದರು. ಇದೇ ವೇಳೆ ಕ್ಲಬ್ಬಿನ 9ನೇ ವರ್ಷದ ‘ಸ್ಥಾಪಕರ ದಿನಾಚರಣೆ’ ಆಚರಿಸಲಾಯಿತು.


ವಲಯ ಸೇನಾನಿ ಗಣೇಶ ಶೆಟ್ಟಿ ಗೋಳ್ತಮಜಲು, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ನಿಕಟಪೂರ್ವ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಬಂಟ್ವಾಳ ಕ್ಲಬ್ಬಿನ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ಮಡಂತ್ಯಾರು ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು.
ಕ್ಲಬ್ಬಿನ ಅಧ್ಯಕ್ಷೆ ಗೀತಾ ಪಿ.ಬಲ್ಲಾಳ್ ಸ್ವಾಗತಿಸಿ, ಕಾರ್ಯದರ್ಶಿ ರೂಪ ರಾಜೇಶ ಶೆಟ್ಟಿ ವಂದಿಸಿದರು. ಸದಸ್ಯರಾದ ರಾಘವೇಂದ್ರ ಭಟ್ ಮತ್ತು ರಮೇಶ್ ನಾಯಕ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *