ಉಡುಪಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿ ಪಡೆದ ಶೈಲೇಶ್ ಶೆಟ್ಟಿ ಎಸ್. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
“ಖಾಸಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಲಿನಿಕಲ್ ಟ್ರಯಲ್ಸ್‌ನ ದತ್ತಾಂಶದ ಸುರಕ್ಷತೆಗಾಗಿ ಸ್ಮಾರ್ಟ್ ಕಾಂಟ್ರಾಕ್ಟ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿ” (Design and Development of Smart Contracts for Securing Clinical Trials Data Using Private Blockchain) ಎಂಬ ಮಹತ್ವದ ಸಂಶೋಧನಾ ವಿಷಯದ ಕುರಿತು ಪ್ರಬಂಧ ಮಂಡಿಸಿ ಅವರು ಈ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.

ವೈದ್ಯಕೀಯ ಸಂಶೋಧನೆಗೆ ಸಂಬಂಧಿಸಿದ ಕ್ಲಿನಿಕಲ್ ಟ್ರಯಲ್ಸ್ ದತ್ತಾಂಶದ ಸುರಕ್ಷತೆ ಹಾಗೂ ಗೌಪ್ಯತೆಯನ್ನು ಖಾಸಗಿ ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಬಲಪಡಿಸುವ ನಿಟ್ಟಿನಲ್ಲಿ ಅವರ ಸಂಶೋಧನೆ ಮಹತ್ವ ಪಡೆದಿದೆ.

ಶೈಕ್ಷಣಿಕ ಹಾಗೂ ತಾಂತ್ರಿಕ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಶೈಲೇಶ್ ಶೆಟ್ಟಿ ಎಸ್. ಅವರಿಗೆ ಸ್ನೇಹಿತರಾದ ಸೀನಿವಾಸ್ ಪಿ.ಎಂ., ಡಾ. ರಾಮಕೃಷ್ಣ, ಡಾ. ರೋಷನ್ ಹಾಗೂ ಪ್ರಜ್ವಲ್ ರಾವ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


