Breaking
18 Nov 2026, Wed

ಚಾರ್ಮಾಡಿಯಲ್ಲಿ ರಥಬೀದಿ ಸ್ಪೋರ್ಟ್ಸ್ ಕ್ಲಬ್‌ನ 2ನೇ ವರ್ಷದ ದೀಪಾವಳಿ ಕ್ರೀಡಾಕೂಟ ಯಶಸ್ವಿ

ಚಾರ್ಮಾಡಿ: ರಥಬೀದಿ ಸ್ಪೋರ್ಟ್ಸ್ ಕ್ಲಬ್ (ರಿ.) ಚಾರ್ಮಾಡಿ ಇದರ ವತಿಯಿಂದ ಆಯೋಜಿಸಲಾಗಿದ್ದ 2ನೇ ವರ್ಷದ ದೀಪಾವಳಿ ಕ್ರೀಡಾಕೂಟವು ನ.15ರಂದು ಭಾನುವಾರ ರಥಬೀದಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕ್ಲಬ್ ಅಧ್ಯಕ್ಷ ಪ್ರದೀಪ್ ಅಂತರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಯಶೋದರ ವರಸರಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರೇಗೌಡ ಅಂತರ, ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಕೇಶವ ಮೂಲ್ಯ ಪಡೇಂಕಲ್ಲು ಹಾಗೂ ಹಿರಿಯರಾದ ನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಅವಿನಾಶ್, ಕಾರ್ಯದರ್ಶಿ ದಿವಿನ್, ಕೋಶಾಧಿಕಾರಿ ಪವನ್ ರಾವ್, ಸಂಚಾಲಕ ಸುಧೀರ್ ಆರ್., ಕ್ರೀಡಾ ಸಂಚಾಲಕ ಕಿರಣ್ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ರಥಬೀದಿ ಸ್ಪೋರ್ಟ್ಸ್ ಕ್ಲಬ್‌ನ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ರಾಜೇಶ್ ಹೊಸಗದ್ದೆ, ಉಪಾಧ್ಯಕ್ಷರಾಗಿ ಹರೀಶ್, ಕಾರ್ಯದರ್ಶಿಯಾಗಿ ಅಶ್ವಿಜ, ಜೊತೆ ಕಾರ್ಯದರ್ಶಿಯಾಗಿ ಶಿವಾಜಿ, ಕೋಶಾಧಿಕಾರಿಯಾಗಿ ಜಗದೀಶ್, ಕ್ರೀಡಾ ಸಂಚಾಲಕರಾಗಿ ಜಿತೇಶ್ ಹಾಗೂ ಸೇವಾ ಪ್ರಮುಖ್ ಆಗಿ ಪಂಚೇಶ್ ಆಯ್ಕೆಯಾಗಿದ್ದಾರೆ. ಇವರೊಂದಿಗೆ 20 ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

ದಿವಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *