ಕಲ್ಲಡ್ಕ : ಬಿಲ್ಲವ ಸಮಾಜ ಸೇವಾ ಟ್ರಸ್ಟ್ (ರಿ) ಕಲ್ಲಡ್ಕ ವಲಯ ಸಮಾಲೋಚನಾ ಸಭೆ ನವಂಬರ್ 15 ಭಾನುವಾರ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಶೇಖರ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯರಾದ ಮಾಜಿ ಶಾಸಕರು ಎ ರುಕ್ಮಯ್ಯ ಪೂಜಾರಿ ಟ್ರಸ್ಟ್ ನ ಎಲ್ಲಾ ಕಾರ್ಯಗಳಿಗೆ ಎಲ್ಲರು ಸಹಕಾರ ನೀಡಬೇಕೆಂದು ಸಮಾಜ ಭಾಂದವರಲ್ಲಿ ವಿನಂತಿಸಿದರು.
ಟ್ರಸ್ಟ್ ನ ಅಧ್ಯಕ್ಷರಾದ ಶೇಖರ್ ಸಾಲಿಯಾನ್ ಟ್ರಸ್ಟ್ ನ ಮುಂದಿನ ಕಾರ್ಯಾಚಟುವಟಿಕೆಯ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಯಾಚಿಸಿದರು.
ಸಭೆಯಲ್ಲಿ ಬಿಲ್ಲವ ಸಮಾಜಕ್ಕೆ ಸ್ವಂತ ನಿವೇಶನ ಖರೀದಿ ಹಾಗೂ ಡಿಸೆಂಬರ್ 6 ಭಾನುವಾರ ಶ್ರೀ ನಾರಾಯಣ ಗುರು ವರ್ಯರ ಗುರುಪೂಜಾ ಕಾರ್ಯಕ್ರಮ ನಡೆಸುವ ಬಗ್ಗೆ ಒಪ್ಪಿಗೆ ಪಡೆಯಲಾಯಿತು.

ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಕಿಶೋರ್ ಕಟ್ಟೆಮಾರ್, ಉಪಾಧ್ಯಕ್ಷರಾದ ಶರತ್ ಅಮ್ಟಾರ್, ಕೋಶಾಧಿಕಾರಿ ದಿನೇಶ್ ಕೃಷ್ಣಕೋಡಿ, ಜತೆ ಕಾರ್ಯದರ್ಶಿ ಜಯಪ್ರಶಾಂತ್ ಕುದ್ರೆಮಾರ್, ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಕಲ್ಲಡ್ಕ ವಲಯಕ್ಕೆ ಸಂಬಂಧಪಟ್ಟ ಗೋಳ್ತ ಮಜಲು, ಬಾಳ್ತಿಲ ವೀರಕಂಭ, ಬೋಳಂತೂರು, ಅಮ್ಟಾರ್, ಬೊಂಡಾಲ ಐದು ಗ್ರಾಮದ ಬಿಲ್ಲವ ಬಂದುಗಳು. ಟ್ರಸ್ಟಿಗಳು ಉಪಸ್ಥಿತರಿದ್ದರು.
ಟ್ರಸ್ಟಿ ಯತೀನ್ ಕುಮಾರ್ ಪ್ರಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ಕಟ್ಟೆಮಾರ್ ವಂದಿಸಿದರು.




