ಸಜೀಪ: ಸಜೀಪ ಮಾಗಣೆಯ ವಿವಿಧ ದೈವ-ದೇವರ ಧಾರ್ಮಿಕ ಕಾರ್ಯಗಳಲ್ಲಿ ಸುಮಾರು 60 ವರ್ಷಗಳಿಂದ ನಾದಸ್ವರ ವಾದಕರಾಗಿ ನಿರಂತರ ಸೇವೆ ಸಲ್ಲಿಸಿ, ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿರುವ ಹಿರಿಯ ನಾದಸ್ವರ ವಾದಕ, 2025-26ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರನಾಥ ಜೋಗಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಪರಿವಾರ ದೈವಗಳ ಅಭಿವೃದ್ಧಿ ಸಮಿತಿಯ ವತಿಯಿಂದ ಅವರ ಸ್ವಗೃಹದಲ್ಲಿ, ಪುತ್ರ ಪ್ರವೀಣ್ ಜೋಗಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ದೈವ-ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಗಡಿ ಪ್ರಧಾನರಾದ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವಾರಪಾಲು, ಮರ್ತಾಜೆ ಗುತ್ತು ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ ಸೋಮು ಮೂಲ್ಯ ಯಾನೆ ಸುಕುಮಾರ್ ಬಂಟ್ವಾಳ್, ಪರಾರಿ ಗುತ್ತಿನ ಧೀರಜ್ ಶೆಟ್ಟಿ, ಅಲಾಡಿ ಗುತ್ತು ಮನೆತನದ ಚಂದ್ರಶೇಖರ್ ಗಟ್ಟಿ, ಗಂಗಾಧರ ಗಟ್ಟಿ ಅಲಾಡಿ, ಸತೀಶ್ ಗಟ್ಟಿ ಅಲಾಡಿ, ದೀಕ್ಷಿತ್ ಶೆಟ್ಟಿ ಸಜಿಪ, ಹಿರಿಯರಾದ ವಾಸು ಮಾಸ್ತರ್ ಕೈಕುಂಜೆ ಹಾಗೂ ಬಿ. ಸದಾನಂದ ಕೈಕುಂಜೆ ಉಪಸ್ಥಿತರಿದ್ದರು.


