Breaking
19 Oct 2026, Mon

ಸಿದ್ಧಕಟ್ಟೆಯಲ್ಲಿ ಶಾರದೋತ್ಸವದ ಮೆರವಣಿಗೆ ವೇಳೆ ವ್ಯಕ್ತಿಗೆ ಚೂರಿ ಇರಿತ; ಆರೋಪಿಗಳು ಪರಾರಿ

ಸಿದ್ಧಕಟ್ಟೆ: ಶಾರದೋತ್ಸವದ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಕಟ್ಟೆಯಲ್ಲಿ ರವಿವಾರ(ಅ.19) ರಾತ್ರಿ ನಡೆದಿದೆ.

ಚೂರಿ ಇರಿತಕ್ಕೊಳಗಾದವರನ್ನು ಪ್ರಕಾಶ್ ಪೂಜಾರಿ (32) ಎಂದು ಗುರುತಿಸಲಾಗಿದ್ದು, ಅವರನ್ನು ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಗಾಯಾಳು ನೀಡಿರುವ ಮಾಹಿತಿಯ ಪ್ರಕಾರ, ಸ್ಥಳೀಯರಾದ ಅಕ್ಷತ್ ಮತ್ತು ಧನುಷ್ ಚೂರಿಯಿಂದ ಇರಿದು ಪರಾರಿಯಾದ ಆರೋಪಿಗಳೆಂದು ಹೇಳಲಾಗಿದೆ.

ಶನಿವಾರ ಸಿದ್ಧಕಟ್ಟೆಯಲ್ಲಿ ಪ್ರಕಾಶ್ ಮತ್ತು ಅಕ್ಷತ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಷತ್ ತನ್ನ ಸ್ನೇಹಿತ ಧನುಷ್‌ನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದು, ಶಾರದೋತ್ಸವದ ಮೆರವಣಿಗೆ ವೀಕ್ಷಿಸುತ್ತಿದ್ದ ವೇಳೆ ಪ್ರಕಾಶ್‌ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *