ಬಿ.ಸಿ.ರೋಡ್: ನಗರದ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ. 17ರಂದು ಸಂಜೆ ವಿಶೇಷ ಭಜನಾ ಸಂಕೀರ್ತನೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಭರತನಾಟ್ಯ ಕಲಾವಿದೆ ಕು. ವೀಕ್ಷಾ (ಪೊಲೀಸ್ ಲೇನ್, ಬಿ.ಸಿ.ರೋಡ್) ಮತ್ತು ತಂಡದವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತಂಡದ ಸದಸ್ಯರಾದ ಕು. ಜಾನ್ವಿ ಜೆ. ಬಂಗೇರ ಹಾಗೂ ಕು. ಸೃಷ್ಟಿ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಭಜನಾ ಸಂಕೀರ್ತನೆಗಳನ್ನು ಹಾಡಿ ನೆರೆದಿದ್ದ ಭಕ್ತಾದಿಗಳ ಮನಸೂರೆಗೊಂಡರು. ಮಾ. ಪುಷ್ಪಕ್ ಅವರು ತಬಲಾದಲ್ಲಿ ಸಾಥ್ ನೀಡಿದರು.

ನವರಾತ್ರಿ ಉತ್ಸವದ ಅಂಗವಾಗಿ ನಡೆದ ಈ ಭಜನಾ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಮೂಡಿಸಿತು.



