Breaking
4 Feb 2026, Wed

ಆಸ್ಕರ್ ಕೃಷ್ಣ ನಿರ್ದೇಶನದ “ದೊಡ್ಮನೆ ಸೊಸೆ” ಚಿತ್ರದ ಮುಹೂರ್ತ

ಬೆಂಗಳೂರು: ಆಸ್ಕರ್ ಕೃಷ್ಣ ನಿರ್ದೇಶನದ “ದೊಡ್ಮನೆ ಸೊಸೆ” ಚಿತ್ರದ ಮುಹೂರ್ತವು ಇಂದು ನಡೆಯಿತು.ಈ ಸಿನಿಮಾದ ಚಿತ್ರೀಕರಣವು ಫೆಬ್ರವರಿ 18ರಿಂದ ಪ್ರಾರಂಭವಾಗಲಿದೆ.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಅತಿಥಿಗಳಿಗೆ, ಚಿತ್ರಭಿಮಾನಿಗಳಿಗೆ ಚಿತ್ರದ ನಿರ್ದೇಶಕ ಆಸ್ಕರ್ ಕೃಷ್ಣ ಧನ್ಯವಾದ ತಿಳಿಸಿದ್ದಾರೆ.

“ನೂರಾರು ಜನ ಸೇರಿದ್ದ ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರದ ಮೊದಲ ಚಿತ್ರಿಕೆಗೆ ಕ್ಲಾಪ್ ನೀಡಿದ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿಯವರಿಗೆ ಹಾಗೂ ಮೊದಲ ಚಿತ್ರಿಕೆಗೆ ಕ್ಯಾಮೆರಾ ಸ್ವಿಚ್ ಆನ್ ಮಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಬಣಕಾರ್ ರವರಿಗೆ ಹಾಗೂ ಈ ಎಲ್ಲಾ ಸಾಧ್ಯತೆಗಳಿಗೆ ಬಹುತೇಕ ಕಾರಣಕರ್ತರಾಗಿ, ಚಿತ್ರದಲ್ಲಿ ದೊಡ್ಮನೆಯ ಯಜಮಾನನ ಪಾತ್ರಧಾರಿಯಾಗಿ ನೇತೃತ್ವವಹಿಸಿರುವ ಹಿರಿಯ ನಟರಾದ ಶ್ರೀ ಸುಂದರ್ ರಾಜ್ ರವರಿಗೆ, ನಿರ್ಮಾಪಕರಾದ ಡಾ. ಸುನಿಲ್ ಕುಮಾರ್ ರವರಿಗೆ, ಮುಹೂರ್ತದ ಕೆಲಸಗಳಿಗಾಗಿ ಅಹೋರಾತ್ರಿ ಕೆಲಸ ಮಾಡಿ ಸುಂದರ ಸಮಾರಂಭವನ್ನು ಸೃಷ್ಟಿ ಮಾಡಿಕೊಟ್ಟ ಗೆಳೆಯ ಪ್ರಶಾಂತ್ ಅಂಕಪುರ ಅವರಿಗೆ, ಚಿತ್ರದ ಕಲಾವಿದರಿಗೆ, ತಂತ್ರಜ್ಞರಿಗೆ ಜೊತೆಗೆ ದೂರದೂರುಗಳಿಂದ ಆಗಮಿಸಿ ಸಮಾರಂಭದ ಸೌಂದರ್ಯವನ್ನು ಹೆಚ್ಚಿಸಿದ ಸ್ನೇಹಿತರಿಗೆ, ಬಂಧುಗಳಿಗೆ ಹಾಗೆಯೇ ಇರುವಲ್ಲಿಂದಲೇ ನನ್ನ ಒಳಿತಿಗಾಗಿ ಪ್ರಾಮಾಣಿಕವಾಗಿ ಹಾರೈಸಿದ ಎಲ್ಲಾ ಗೆಳೆಯ, ಗೆಳತಿಯರಿಗೆ, ಹಿರಿಯರಿಗೆ ಸಾವಿರ ವಂದನೆಗಳು” ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *