Breaking
3 Oct 2026, Sat

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಗಕಜೆಕಾರು, ಇಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಗಕಜೆಕಾರು,ಇಲ್ಲಿ ಕೆ.ವೈ.ಪೂಜಾರಿ ಕುಟುಂಬಿಕರ ಪ್ರಾಯೋಜಕತ್ವದಲ್ಲಿ ನಡೆದ 3 ದಿನಗಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮ ಅಕ್ಟೋಬರ್ 2 ಶುಕ್ರವಾರ ಜರಗಿತು .


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಓಬಯ್ಯ ಸರ್ಕಾರಿ ಶಾಲೆಗಳಲ್ಲಿ ಮೌಲ್ಯಯುತ ಶಿಕ್ಷಣ ಸಿಗುತ್ತಿದ್ದು ಜೊತೆಗೆ ಸದೃಢ ಸಮಾಜ ನಿರ್ಮಾಣ ಮಾಡಲು ವ್ಯಕ್ತಿತ್ವ ವಿಕಾಸನ ಶಿಬಿರಗಳು ಸಹಕಾರಿಯಾಗಿದೆ ಎಂದರು.


ಸಂಪನ್ಮೂಲ ವ್ಯಕ್ತಿ ಭರತ್ ಕುಮಾರ್ ಚೆನ್ನೈತ್ತೋಡಿ ಸದಭಿರುಚಿಯ ಕಲೆಗಳನ್ನು ಕಲಿಯಲು ಸಿಗುವ ಇಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಸಮಯವನ್ನು ಸದ್ಬಳಕೆ ಮಾಡಿದರೆ ಯಶಸ್ವೀ ವ್ಯಕ್ತಿಗಳಾಗಲು ಸಾಧ್ಯ ಕಲಾಹೃದಯಿಗಳು ದೇಶದ ಆಸ್ತಿ. ಕಲೆಯನ್ನು ಪ್ರೀತಿಸಿ ಆದರಿಸುವವರು ಎಲ್ಲರನ್ನೂ ಪ್ರೀತಿಸುವುದಲ್ಲದೆ ಸರ್ವರ ಗೌರವಕ್ಕೆ ಪಾತ್ರರಾಗುತ್ತಾರೆ ” ಎಂದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಅತಿಥಿ ಶಿಕ್ಷಕಿಯರಾದ ಪೂರ್ಣಿಮಾ, ರೂಪಾ , ಪವಿತ್ರ ಬಿ.ಕೆ. ಹಾಗೂ ವಿದ್ಯಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು.ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಗೌರವ ಶಿಕ್ಷಕಿ ಕುಮಾರಿ ಅಕ್ಷತಾ ನುಜರ್ಲೋಡಿ ವಂದಿಸಿದರು.ಟಿಜಿಟಿ ಶಿಕ್ಷಕ ಹರೀಶಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *