ಮಾಣಿ: ನಾರಾಯಣ ಗುರುಗಳ ತತ್ತ್ವ, ಆದರ್ಶ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಆಳವಾಗಿ ಅರಿಯಲು ಶಿವಗಿರಿ ಯಾತ್ರೆ ಅಪೂರ್ವ ಅವಕಾಶವಾಗಿದೆ ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ ಹೇಳಿದರು.

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 26ರಂದು ಸೀತಾ ಗುಜುರುಕ್ ಕಡೇಶಿವಾಲ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಶಿವಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಾರಾಯಣ ಗುರುಗಳ ವಿಚಾರಧಾರೆ, ಜೀವನ ಸಂದೇಶ ಹಾಗೂ ಸಮಾಜ ಪರಿವರ್ತನೆಯ ಆಶಯಗಳನ್ನು ಕಣ್ಣಾರೆ ಕಾಣಲು ಸಾಧ್ಯವಾಗುತ್ತದೆ. ಶಿವಗಿರಿ ಯಾತ್ರೆ ಕೈಗೊಂಡಾಗಲೇ ಗುರುಗಳ ತತ್ತ್ವದ ನಿಜರೂಪವನ್ನು ಅರಿಯಲು ಸಾಧ್ಯ,” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ, ರಾಜೇಶ್ ಕೊಟ್ಯಾನ್, ಜನಾರ್ದನ ಕೊಡಂಗೆ, ಲೋಕೇಶ್, ಬಾಲಕೃಷ್ಣ ಶೇರಾ, ಸತೀಶ್, ಸುಧಾ, ಸೀತಾ ವಿದ್ಯಾಧರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ನಾರಾಯಣ ಗುರುತತ್ತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಶ್ರೀಧರ ಪೂಜಾರಿ ಮುಜಾಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.


