ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಆಶ್ರಯದಲ್ಲಿ ನಡೆಯುವ 2025-26ನೇ ಸಾಲಿನ ತೆಕ್ಕಾರು ಟೈಗರ್ಸ್ ಕಾರ್ಯಕ್ರಮದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ತೆಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ತೆಕ್ಕಾರು ಟೈಗರ್ಸ್ ಅಧ್ಯಕ್ಷ ತುಲಸಿ ವಿ. ಕೋಟ್ಯಾನ್ ಬೇನಪ್ಪು ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ನವರಾತ್ರಿ ಪ್ರಯುಕ್ತ ನಡೆಯಲಿರುವ 5ನೇ ವರ್ಷದ ಅದ್ಧೂರಿ ಕಾರ್ಯಕ್ರಮಕ್ಕೆ ಗೌರವ ಸಲಹೆಗಾರರಾಗಿ ಶಾಸಕ ಹರೀಶ್ ಪೂಂಜಾ, ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿಗಳಾದ ನಟೇಶ್ ಪೂಜಾರಿ ಬೆಂಗಳೂರು, ಹರೀಶ್ ಪೂಜಾರಿ ನಿರಾಳ ಉಪ್ಪಿನಂಗಡಿ, ದಂತ ವೈದ್ಯ ಡಾ. ರಾಜಾರಾಂ ಕೆ.ಬಿ. ಉಪ್ಪಿನಂಗಡಿ ಹಾಗೂ ಅಣ್ಣು ಪೂಜಾರಿ ಬಾಗ್ಲೋಡಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ತುಲಸಿ ವಿ. ಕೋಟ್ಯಾನ್ ಬೇನಪ್ಪು, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಆನಲ್ಕೆ, ರಂಜಿತ್ ಗೌಡ ಪಿಲಿಬೈಲು, ಸಂದೀಪ್ ಕುಪ್ಪೆಟ್ಟಿ, ಸತೀಶ್ ಗೌಡ ಪಿಲಿಗೂಡು ಹಾಗೂ ಭರತ್ ಪೂಜಾರಿ ಬೇನಪ್ಪು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ ಪೂಜಾರಿ ಮಜ್ಜಾಲೆ ಹಾಗೂ ಯೋಗೀಶ್ ವಿದ್ಯಾಪುರ, ಜೊತೆ ಕಾರ್ಯದರ್ಶಿಗಳಾಗಿ ಜಯರಾಜ್ ಬಾಜಾರ ಹಾಗೂ ಪ್ರದೀಪ್ ಪೂಜಾರಿ ವಂದಾಯ, ಕೋಶಾಧಿಕಾರಿಗಳಾಗಿ ಪ್ರಹ್ಲಾದ್ ಗೌಡ ವಾಟೆತಳ ಹಾಗೂ ವಿಕ್ರಮ್ ವಿದ್ಯಾಪುರ ಆಯ್ಕೆಯಾಗಿದ್ದಾರೆ.

ಪ್ರಚಾರ ಮತ್ತು ಮಾಧ್ಯಮ ಸಂಚಾಲಕರಾಗಿ ಶ್ರೀಕಾಂತ್ ಶೆಟ್ಟಿ ಇಳಂತಿಲ, ಕಾನೂನು ಸಲಹೆಗಾರರಾಗಿ ಹಿತೇಶ್ ಶೆಟ್ಟಿ ವಿದ್ಯಾಪುರ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣಾ ಸಂಚಾಲಕರಾಗಿ ದೇವಿಪ್ರಸಾದ್ ಪೂಜಾರಿ ಬೇನಪ್ಪು, ಅಭಿಷೇಕ್ ವಿದ್ಯಾಪುರ, ಚಂದನ್ ಗೌಡ ಪಿಲಿಬೈಲು ಮತ್ತು ಸುದರ್ಶನ್ ಗೌಡ ಪಿಲಿಬೈಲು ಆಯ್ಕೆಯಾಗಿದ್ದಾರೆ.

ಪ್ರಧಾನ ಸಂಚಾಲಕರಾಗಿ ಕಿರಣ್ ರಾಜ್ ಬೇನಪ್ಪು, ಸುರೇಶ್ ಮರಮ ಪುಳಿತ್ತಡಿ, ದಿವಾಕರ ಅದಮ, ಮೋಹಿತ್ ಸಾಲಿಯಾನ್ ಮುಗ್ಗ, ದಿನೇಶ್ ಮಲೆಕೋಡಿ ಹಾಗೂ ಚರಣ್ ರಾಜ್ ಬೇನಪ್ಪು ಆಯ್ಕೆಯಾಗಿದ್ದಾರೆ.


