ಬಂದಾರು: ಶಿವಗೆಳೆಯರ ಬಳಗ (ರಿ.) ಹಾಗೂ ನವ್ಯಶ್ರೀ ಯುವತಿ ಮಂಡಲ (ರಿ.), ಮೈರೋಳ್ತಡ್ಕ–ಬಂದಾರು ಇವರ ಸಂಯುಕ್ತ ಆಶ್ರಯದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಮೈರೋಳ್ತಡ್ಕ ವಠಾರದಲ್ಲಿ ಸೆ. 14 ರಂದು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಈ ವೇಳೆ ಸಮಿತಿಯ ವತಿಯಿಂದ ಶಾಸಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಬಳಿಕ ಶಿವಾಜಿ ಫ್ರೆಂಡ್ಸ್ ನೇತೃತ್ವದ ಶಿವನಗರ ಸರ್ಕಲ್ ಬಳಿಯಿರುವ ಶಿವಾಜಿ ಪ್ರತಿಮೆಗೆ ಶಾಸಕ ಹರೀಶ್ ಪೂಂಜಾ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀದೇವಿ ಪ್ರತಿಷ್ಠಾನದ ಅಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗಣೇಶೋತ್ಸವದ ಅಂಗವಾಗಿ ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪಾಂಚಜನ್ಯ ಗೆಳೆಯರ ಬಳಗ ಪಾಂಜಾಳ ಮತ್ತು ಶ್ರೀ ಸದಾಶಿವ ಭಜನಾ ಮಂಡಳಿ ಕುರಾಯ ವತಿಯಿಂದ ಭಜನಾ ಕಾರ್ಯಕ್ರಮವೂ ಜರುಗಿತು.

ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಲಕ್ಕಿಡಿಪ್ ಡ್ರಾ, ಮಕ್ಕಳ ಕುಣಿತ ಭಜನೆ ಹಾಗೂ ಚೆಂಡೆ ವಾದ್ಯಗಳೊಂದಿಗೆ ವೈಭವದ ಮೆರವಣಿಗೆ ನಡೆಯಿತು. ಭಾರತ ಮಾತೆಯ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರಿಗೆ ಪೂಜೆ ಪ್ರಸಾದ, ಸಿಹಿತಿಂಡಿ, ಪಾನೀಯ ಹಾಗೂ ಫಲಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮೆರವಣಿಗೆ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಶಿವ ಗೆಳೆಯರ ಬಳಗದ ಅಧ್ಯಕ್ಷರಾದ ಜಗದೀಶ್ ಗೌಡ ಕೊಂಬೇಡಿ, ಉಪಾಧ್ಯಕ್ಷರಾದ ದಾಮೋದರ ಗೌಡ ಚಾಕೋಟೆದಡಿ, ಕಾರ್ಯದರ್ಶಿ ಚೇತನ್ ಗೌಡ ಕುರಿಯಾಳ, ಜೊತೆ ಕಾರ್ಯದರ್ಶಿ ಚಿದಾನಂದ ಗೌಡ ಪಾಂಜಾಳ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊಳ್ಳಕೋಡಿ, ತಾಲೂಕಿನ ಪ್ರಮುಖರಾದ ಮಹೇಶ್ ಕೋಟ್ಯಾನ್ ಜೇಂಕ್ಯಾರ್, ಹರೀಶ್ ಗೌಡ ಕೊಯಿಲ ಕಾಯರ್ತಡ್ಕ, ಪ್ರೀತಮ್ ಧರ್ಮಸ್ಥಳ, ಹರ್ಷ ಜೈನ್ ಧರ್ಮಸ್ಥಳ, ರಾಜೇಶ್ ಎಂ ಕೆ ಕಾಯರ್ತಡ್ಕ, ರಾಜೇಶ್ ಆರಂಬೋಡಿ,ಜಗದೀಶ್ ಗೌಡ ದಿಡುಪೆ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ,ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ,ಪ್ರಮುಖರಾದ ಶ್ರೀಧರ ಗೌಡ ಕುಂಬುಡಂಗೆ, ಬಾಲಕೃಷ್ಣ ಗೌಡ ದಾಸರ ಕೋಡಿ, ಚಂದಪ್ಪ ಗೌಡ ನಡುಮಜಲು, ಡೊoಬಯ್ಯ ಗೌಡ ಖಂಡಿಗ, ನಿರಂಜನ ಗೌಡ ನಡುಮಜಲು, ವೆಂಕಟರಮಣ ಗೌಡ ಬಾಳೆಹಿತ್ತಿಲು, ಕೃಷ್ಣಯ್ಯ ಆಚಾರ್ಯ, ಜನಾರ್ಧನ ಗೌಡ ಪುಯಿಲ,ಪ್ರಶಾಂತ್ ಗೌಡ ನಿರುಂಬುಡ, ರಂಜಿತ್ ಗೌಡ ನಡುಮಜಲು, ವಕೀಲರಾದ ಸಂದೇಶ್ ಗೌಡ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಹಾಗೂ ಅನೇಕ ಗಣ್ಯರು, ಪ್ರಮುಖರು, ಉಪಸ್ಥಿತರಿದ್ದರು.



