Breaking
13 Sep 2026, Sun

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ ಸೇವೆ

ಸಾಲೆತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.), ವಿಟ್ಲ ಇದರ ಸಾಲೆತ್ತೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಾಲೆತ್ತೂರು–ಕುಡ್ತಮುಗೇರು ವತಿಯಿಂದ ಶ್ರೀ ಸದಾಶಿವ ದೇವಸ್ಥಾನ ಶಿವಗಿರಿ, ಸಾಲೆತ್ತೂರು ಇಲ್ಲಿ ಶ್ರಮದಾನ ಸೇವೆ ನಡೆಸಲಾಯಿತು.

ಶ್ರಮದಾನ ಕಾರ್ಯದಲ್ಲಿ ತಂಡದ ಸದಸ್ಯರಾದ ಗಣೇಶ್ ಕೆ.ಬಿ., ಪುರುಷೋತ್ತಮ್, ರಾಮ ಮೂಲ್ಯ, ರಂಜಿತ್ ಪೂಜಾರಿ, ಜಯರಾಮ ಯು., ನವೀನ್ ಪಿ., ಈಶ್ವರ ಪೂಜಾರಿ, ಮಾಧವ ಬಿ., ಕುಶಾಲ ಸೇರಿದಂತೆ ಹಲವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ದೇವಿದಾಸ್ ಶೆಟ್ಟಿ ಪಾಲ್ತಾಜೆ, ಗಿರೀಶ್ ರೈ ಕುಳಾಲು, ರಂಗನಾಥ ರೈ ಬಿಳಿಯೂರು ಗುತ್ತು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶೌರ್ಯ ತಂಡದ ಸೇವಾ ಕಾರ್ಯಕ್ಕೆ ದೇವಸ್ಥಾನದ ಆಡಳಿತ ಸಮಿತಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *