Breaking
22 Sep 2026, Tue

ಭರತನಾಟ್ಯ ಸೀನಿಯರ್ ಪರೀಕ್ಷೆ: ಕುಮಾರಿ ಇಶಾ ಕೀರ್ತಿ. ಎಂ ಅವರಿಗೆ ಅತ್ಯುತ್ತಮ ಶ್ರೇಣಿ

ವಿಟ್ಲ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ವಿದ್ಯಾರ್ಥಿನಿ
ಕುಮಾರಿ ಇಶಾ ಕೀರ್ತಿ. ಎಂ. ಅವರು ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಶೇಕಡಾ 90 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣರಾಗಿರುತ್ತಾರೆ.

ಇವರು ನೃತ್ಯ ವಿದುಷಿ ಶಾಲಿನಿ ಆತ್ಮಭೂಷಣ್ ಭಟ್ ಪುತ್ತೂರು ಇವರ ಶಿಷ್ಯೆ ಹಾಗೂ ವಿಟ್ಲ ಬೆನಕ ಕ್ಲಿನಿಕ್ ವೈದ್ಯ ಡಾ. ಅರವಿಂದ ಎಂ. ಮತ್ತು ಡಾ. ಸ್ಮಿತಾ ಅರವಿಂದ ದಂಪತಿಗಳ ಸುಪುತ್ರಿ.

Leave a Reply

Your email address will not be published. Required fields are marked *