Breaking
3 Feb 2026, Tue

ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆ: ವಿದ್ಯಾರ್ಥಿನಿ ಲಿಖಿತಾ ಆರ್ ಸಾಲ್ಯಾನ್ ಗೆ ಪ್ರಥಮ ಸ್ಥಾನ

ಸಿದ್ದಕಟ್ಟೆ: ಕರ್ನಾಟಕ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ದಿನಾಂಕ 23/01/2025 ರಂದು ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ ಬಂಟ್ವಾಳ ತಾಲೂಕು.ದ.ಕ. ಇಲ್ಲಿನ ವಿದ್ಯಾರ್ಥಿನಿ ಲಿಖಿತಾ ಆರ್ ಸಾಲ್ಯಾನ್ ಪ್ರಥಮ ಸ್ಥಾನ ಪಡೆದು ನಮ್ಮ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ನಮ್ಮ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಒಟ್ಟು 105 ಸ್ಪರ್ಧಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ ಸಾಧನೆಯಾಗಿದೆ.

ಶಾಲಾ ಸಮಾಜ ವಿಜ್ಞಾನ ಶಿಕ್ಷಕರು,ಭಾಷಣಕಾರರೂ ಆಗಿರುವ ಮಹೇಶ್ ಕುಮಾರ್ ವಿ ಕರ್ಕೇರ ರವರ ಮಾರ್ಗದರ್ಶನದಲ್ಲಿ ಲಿಖಿತಾ ರವರು ಈ ಸಾಧನೆ ಮಾಡಿರುತ್ತಾರೆ.

ಲಿಖಿತಾ ಆರ್ ಸಾಲ್ಯಾನ್ ರವರು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಕೇವಲ 3ವರ್ಷಗಳಲ್ಲಿ 4ಬಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 2023ರಲ್ಲಿ ಪ್ರತಿಭಾ ಕಾರಂಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದು,2025ನೇ ಸಾಲಿನ ಪ್ರಾಚ್ಯ ಪ್ರಜ್ಞೆ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

Leave a Reply

Your email address will not be published. Required fields are marked *