ಬೆಳ್ತಂಗಡಿ: ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಸುಂದರ್ ಕಾಶಿಪಟ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಉದ್ದೇಶ ಹಾಗೂ ಮೀಸಲಾತಿಗೆ ಸಂಬಂಧಿಸಿದ ಸಂಕ್ಷಿಪ್ತ ಮಾಹಿತಿಯನ್ನು ಶಿಕ್ಷಕ ಸುಕೇಶ್ ಕೆ. ಮಾಲಾಡಿ ನೀಡಿದರು. ಬಳಿಕ ಯುವ ಮುಖಂಡರು ತಮ್ಮ ಅಭಿಪ್ರಾಯ, ಪ್ರಶ್ನೆ ಹಾಗೂ ಸಲಹೆಗಳನ್ನು ಹಂಚಿಕೊಂಡರು. ಸಮಿತಿಯ ಗೌರವ ಸಲಹೆಗಾರ ಶೇಖರ್ ಕುಕ್ಕೇಡಿ ಅವರು ಸಂವಾದದ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿದರು.

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಶಿವಾನಂದ ಪಡಂಗಡಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಜಿರೆ, ಗೌರವ ಸಲಹೆಗಾರರಾದ ಓಬಯ್ಯ ಆರಂಬೋಡಿ, ಶೇಖರ್ ವಿ. ಧರ್ಮಸ್ಥಳ, ಬಾಬಿ ಮಾಲಾಡಿ, ನಾರಾಯಣ ಪುದುವೆಟ್ಟು, ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಕೊಕ್ಕಡ ಹಾಗೂ ಯುವ ವಕೀಲೆ ಸವಿತಾ ಉಪಸ್ಥಿತರಿದ್ದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ಸುಶ್ಮೀತಾ ಮಾಲಾಡಿ ಸ್ವಾಗತಿಸಿದರು. ಮಾನ್ಯ ಉಜಿರೆ ವಂದಿಸಿದರು. ವಿನಯ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.



