Breaking
1 Sep 2026, Tue

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ) ಮಿಜಾರು ಇದರ 76ನೇ ಮಾಸಿಕ ಸೇವಾಯೋಜನೆ ಹಸ್ತಾಂತರ

ಮಂಗಳೂರು: ತಾಲೂಕಿನ ಕುದ್ರೋಳಿ ನಿವಾಸಿಯಾಗಿರುವ ನಿತಿನ್ ಕುಮಾರ್ ಇವರು ಪೈಟಿಂಗ್ ಕೆಲಸ ಮಾಡುವಾಗ ಮಹಡಿಯಿಂದ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದು ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದಾರೆ. ಇವರು ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ವೈದ್ಯರು 8 ತಿಂಗಳ ಕಾಲ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಇವರಿಗೆ ತಮ್ಮ ಜೀವನವನ್ನು ನಡೆಸಲು ತುಂಬಾ ಕಷ್ಟವಾಗುತ್ತಿದೆ.

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ ಇವರ ಮನವಿಗೆ ಸ್ಪಂದಿಸಿ ರೂ.10,000/- ರೂಪಾಯಿಯ ಚೆಕ್ಕನ್ನು ಸಿದ್ಧಿವಿನಾಯಕ ಕಾಳಿಕಾಂಬ ದೇವಸ್ಥಾನ ಕಾರ್ಸ್ಟ್ರಿಟ್ ಮಂಗಳೂರು ಇದರ ಅರ್ಚಕರಾದ ಚೇತನ್ ಪುರೋಹಿತರ ಹಸ್ತದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಸೇವಾ ಮಾಣಿಕ್ಯರಾದ ಧನುಷ್ ಸರಪಾಡಿ, ಅವಿನಾಶ್ ಬಂಟ್ವಾಳ ಉಪಸ್ಥಿತರಿದ್ದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.) ಮಿಜಾರು ಇದರ ಕಾರ್ಯವಿಭಾಗದಿಂದ ಕೃತಜ್ಞತೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *