Breaking
17 Oct 2026, Sat

2026ನೇ ಸಾಲಿನ ಅಗಸ್ಟ್ ತಿಂಗಳ ಮಾಸಿಕ 15ನೇ ಸೇವಾ ಹಸ್ತಾಂತರ

ಬೆಳ್ತಂಗಡಿ: 2026ನೇ ಸಾಲಿನ ಅಗಸ್ಟ್ ತಿಂಗಳ ಮಾಸಿಕ 15ನೇ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮ ಆ.30ನೇ ರವಿವಾರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕರ್ಣಾಲ್ ನಿವಾಸಿಯಾದ ಶ್ರೀಮತಿ ಯಶೋಧ ಇವರು ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಮಂಗಳೂರಿನ K.M.C ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆಗಾಗಿ ಮಾಸಿಕ ಸೇವಾ ಯೋಜನೆಯಲ್ಲಿ ರೂ. 10,000/- ಧನ ಸಹಾಯವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಎಲ್ಲಾ ಸೇವಾ ಮಾಣಿಕ್ಯರು ಎಲ್ಲರೂ ಉಪಸ್ಥಿತರಿದ್ದರು. ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕರುನಾಡು ಚಾರಿಟೇಬಲ್ ಟ್ರಸ್ಟ್(ರಿ.) ಕರ್ನಾಟಕ ಇದರ ಆಡಳಿತ ವಿಭಾಗದಿಂದ ಕೃತಜ್ಞತೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *