Breaking
14 Oct 2026, Wed

ನೇಪಾಳ ಗಡಿ ಪ್ರವಾಹದ ಬೆನ್ನಲ್ಲೇ ಚೀನಾದಲ್ಲಿ 5.1 ತೀವ್ರತೆಯ ಭೂಕಂಪ

ಬೀಜಿಂಗ್: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಭೀಕರ ಪ್ರವಾಹ ಸಂಭವಿಸಿದ ಬೆನ್ನಲ್ಲೇ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶುಕ್ರವಾರ ಮಧ್ಯಾಹ್ನ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಸಿಚುವಾನ್ ಪ್ರಾಂತ್ಯದ ಲಾಂಗ್‌ಚಾಂಗ್ ಸಮೀಪ ಭೂಮಿಯ ಮೇಲ್ಮೈಯಿಂದ ಸುಮಾರು 13 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ ತಿಳಿಸಿದೆ.

ಇದರ ನಡುವೆ ಮಣ್ಣಿನ ಕುಸಿತದಿಂದ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದ್ದ ಕೃತಕ ಸರೋವರ ಒಡೆಯುವ ಆತಂಕವೂ ಎದುರಾಗಿದೆ. ಇದು ಒಡೆದರೆ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಟಿಬೆಟ್ ಭಾಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರವಾಹದ ಅಪಾಯದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ತುರ್ತು ರಕ್ಷಣಾ ಸಿಬ್ಬಂದಿಯನ್ನು ಕನಿಷ್ಠ ಒಂದು ಕಿಲೋಮೀಟರ್ ಹಿಂದಕ್ಕೆ ಸರಿಯುವಂತೆ ಚೀನಾ ಸರ್ಕಾರ ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಕಣಿವೆ ಪ್ರದೇಶಗಳಿಂದ 499 ಸ್ಥಳೀಯ ನಿವಾಸಿಗಳು ಹಾಗೂ 555 ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Leave a Reply

Your email address will not be published. Required fields are marked *