Breaking
14 Oct 2026, Wed

ಉಜಿರೆಯಲ್ಲಿ ಮದುವೆ, ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಮಾರಂಭಗಳಿಗೆ ಆಕರ್ಷಕ ವೇದಿಕೆ ವಿನ್ಯಾಸದ ಹೊಸ ತಾಣ ಶುಭಾರಂಭ

ಉಜಿರೆ: ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ, ವಾರ್ಷಿಕೋತ್ಸವ ಸೇರಿದಂತೆ ಜೀವನದ ವಿಶೇಷ ಕ್ಷಣಗಳನ್ನು ಸುಂದರವಾಗಿ ಆಚರಿಸಲು ವೇದಿಕೆ ವಿನ್ಯಾಸ ಮತ್ತು ಆಕರ್ಷಕ ಅಲಂಕಾರಗಳೊಂದಿಗೆ ‘Celebrations by Flake ’n Plate’ ಸಂಸ್ಥೆಯು ಉಜಿರೆಯ ಬೆಳಾಲು ಕ್ರಾಸ್‌ನ ಸಾಯಿರಾಮ್ ಕಾಂಪ್ಲೆಕ್ಸ್‌ನಲ್ಲಿ ಅ.12ರಂದು ಶುಭಾರಂಭಗೊಂಡಿತು.

ಪೇಜ್ ಪ್ಲೇ ಸಮೀಪ ಆರಂಭಗೊಂಡಿರುವ ಈ ಸಂಸ್ಥೆಯು ಗ್ರಾಹಕರ ವಿವಿಧ ಶುಭ ಸಮಾರಂಭಗಳಿಗೆ ಆಕರ್ಷಕ ವೇದಿಕೆ ವಿನ್ಯಾಸಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಕುಟುಂಬದ ಸಂಭ್ರಮ, ಸ್ನೇಹಿತರೊಂದಿಗೆ ಆಚರಿಸುವ ವಿಶೇಷ ದಿನಗಳು ಹಾಗೂ ಜೀವನದ ಮಹತ್ವದ ಘಟ್ಟಗಳನ್ನು ಸ್ಮರಣೀಯವಾಗಿಸಲು ಸಂಸ್ಥೆಯು ವಿಭಿನ್ನ ಅಲಂಕಾರಿಕ ಪರಿಕಲ್ಪನೆಗಳನ್ನು ಪರಿಚಯಿಸಿದೆ.

ಸಂಸ್ಥೆಯ ಪ್ರಮುಖ ಆಕರ್ಷಣೆಯಾಗಿ ಮೂರು ವಿಭಿನ್ನ ಮಾದರಿಯ ಸಿಗ್ನೇಚರ್ ಸ್ಟೇಜ್ ವಿನ್ಯಾಸಗಳನ್ನು ಪರಿಚಯಿಸಲಾಗಿದೆ. ಒಂದೇ ಮಾದರಿಯ ಅಲಂಕಾರಕ್ಕೆ ಸೀಮಿತವಾಗದೆ, ವಿಭಿನ್ನ ವಿನ್ಯಾಸಗಳ ಮೂಲಕ ಪ್ರತಿಯೊಂದು ಕಾರ್ಯಕ್ರಮಕ್ಕೂ ವಿಶಿಷ್ಟ ಮೆರುಗು ನೀಡುವುದು ಸಂಸ್ಥೆಯ ವಿಶೇಷತೆಯಾಗಿದೆ.

ಅ.12ರಂದು ಸಂಜೆ 4 ಗಂಟೆಗೆ ನಡೆದ ಶುಭಾರಂಭ ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕಿನ ಎಂಟು ವರ್ಷದ ಮೋಟೋಕ್ರಾಸ್ ಮತ್ತು ಸೂಪರ್‌ಕ್ರಾಸ್ ರೈಡರ್ ಅಯಾನ್ ರಫಿ ಗೌರವ ಅತಿಥಿಯಾಗಿ ಭಾಗವಹಿಸಿದರು.

ಮುಖ್ಯ ಅತಿಥಿಗಳಾಗಿ ರೈಡಿಂಗ್ ಜೋಡಿ ವ್ಲಾಗರ್ಸ್‌ನ ಶ್ಯಾಮ್ ಕಾಮತ್ ಮತ್ತು ಶೈನಿ ಕಾಮತ್, ಬೆಳ್ತಂಗಡಿ ಕೆಜೆಎಂ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಹಳ್ಳಿಮನೆ ರೆಸಾರ್ಟ್ ಮತ್ತು ರೆಸ್ಟೋರೆಂಟ್‌ನ ಮಾಲಕ ಪ್ರವೀಣ್ ಹಳ್ಳಿಮನೆ, ಕರ್ನಾಟಕ ಹೈಕೋರ್ಟ್‌ನ ನ್ಯಾಯವಾದಿ ಅತಾವುಲ್ಲಾ ಪುಂಜಾಲಕಟ್ಟೆ, ಉಜಿರೆ ಎಂ.ಜೆ.ಎಂ. ಹಳೆಪೇಟೆಯ ಅಧ್ಯಕ್ಷ ಅಬೂಬಕ್ಕರ್ ಸುಪ್ರೀಂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವೈಷ್ಣವಿ ಉಜಿರೆ, ಬ್ಲಾಕ್ ಕ್ವೀನ್, ಬ್ಯೂಟಿ ಲಾಂಚ್ ಬ್ಯೂಟಿ ಪಾರ್ಲರ್‌ನ ಮಾಲಕಿ ಮಿನ್ಸ್ ಹಾಗೂ ಸಂಸ್ಥೆಯ ಸಲಹೆಗಾರ ಇಕ್ಬಾಲ್ ಕಾಶಿಬೆಟ್ಟು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಅಫೀಝ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಗ್ರಾಫಿಕ್ ವಿನ್ಯಾಸ ರೂಪಿಸಿದ ಗ್ರಾಫಿಕ್ ಸ್ಕ್ವೇರ್‌ನ ಅನಸ್ ಅಹ್ಮದ್ ವಂದಿಸಿದರು.

ಜೀವನದ ಅಮೂಲ್ಯ ಕ್ಷಣಗಳಿಗೆ ಸೊಬಗು, ಸಂಭ್ರಮಕ್ಕೆ ಹೊಸ ಕಳೆ ಹಾಗೂ ನೆನಪುಗಳಿಗೆ ವಿಶೇಷ ರೂಪ ನೀಡುವ ಆಶಯದೊಂದಿಗೆ ‘Celebrations by Flake ’n Plate’ ತನ್ನ ಸೇವಾ ಪಯಣ ಆರಂಭಿಸಿದೆ.

Leave a Reply

Your email address will not be published. Required fields are marked *