ಮಂಗಳೂರು: ನವದೆಹಲಿಯ ಡಾನ್ ಬೋಸ್ಕೊ ಪ್ರೊವಿನ್ಶಿಯಲ್, ಆಕ್ವಾದಲ್ಲಿ ನಡೆದ ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ (AICU) ವಾರ್ಷಿಕ ಮಹಾಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಸ್ಥೆಗೆ ‘ಎಐಸಿಯು ಸರ್ವಿಸ್ ಗ್ರೇಟಿಟ್ಯೂಡ್ ಅವಾರ್ಡ್-2026’ ನೀಡಿ ಗೌರವಿಸಲಾಯಿತು.

ಸಂಸ್ಥೆಯು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸಂಸ್ಥೆಯ ಅಧ್ಯಕ್ಷ ಸಂತೋಷ್ ಡಿಸೋಜಾ ಹಾಗೂ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿ. ಸೋಜಾ, ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ, ಫ್ಲೇವಿ ಡಿ. ಸೋಜಾ, ಸದಸ್ಯರಾದ ಆಲ್ವಿನ್ ಮಿನೇಜಸ್ ಹಾಗೂ ದೀಪಕ್ ಡಿ. ಸೋಜಾ ಉಪಸ್ಥಿತರಿದ್ದರು.




