ಮಾಲಾಡಿ: ಸ.ಉ.ಪ್ರಾ. ಶಾಲೆ, ಮಾಲಾಡಿಯಲ್ಲಿ ಆ.18ರಂದು ಪೋಷಕರಕ್ಷಕ ಸಭೆ ಹಾಗೂ ಊರದಾನಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು, ಸ್ವಚ್ಛತೆ, ಆರೋಗ್ಯ, ವೈಯಕ್ತಿಕ ಬೆಳವಣಿಗೆ ಹಾಗೂ ಎಫ್.ಎ.1 ಪರೀಕ್ಷೆಯ ಫಲಿತಾಂಶದ ಕುರಿತು ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಪೋಷಕರೊಂದಿಗೆ ಚರ್ಚಿಸಿದರು.

ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಾ, ಅಗತ್ಯ ಸಂದರ್ಭದಲ್ಲಿ ವಿವಿಧ ರೀತಿಯ ಸಹಕಾರ, ದೇಣಿಗೆ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುತ್ತಿರುವ ಊರದಾನಿಗಳಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಹಾಗೂ ಶ್ರೀ ನಿತ್ಯಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾರಂಕಿ ವಲಯದ ಮೇಲ್ವಿಚಾರಕರಾದ ಶ್ರೀ ಕೇಶವ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಹಕೀಂ, ಉಪಾಧ್ಯಕ್ಷೆ ಶ್ರೀಮತಿ ಶೋಭ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜುಲಿಯಾನ ಶಾಲಿನಿ ಬರೆಟ್ಟೊ ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಶ್ರೀಮತಿ ಚೈತ್ರಾ ಸ್ವಾಗತಿಸಿದರು. ಶ್ರೀಮತಿ ದಿವ್ಯ ವಂದಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಮಮತಾ ಕೆ. ಕಾರ್ಯಕ್ರಮ ನಿರೂಪಿಸಿದರು.




