Breaking
10 Oct 2026, Sat

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ‘ವೆಬ್ ಟೆಕ್ ಫುಲ್ ಸ್ಟ್ಯಾಕ್ ಫಾಸ್ಟ್ ಟ್ರ್ಯಾಕ್’ ಉಚಿತ ತರಬೇತಿಗೆ ಚಾಲನೆ

ಕಕ್ಯಪದವು: ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ತಾಂತ್ರಿಕ ಜ್ಞಾನ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ‘ವೆಬ್ ಟೆಕ್ ಫುಲ್ ಸ್ಟ್ಯಾಕ್ ಫಾಸ್ಟ್ ಟ್ರ್ಯಾಕ್’ ಒಂದು ತಿಂಗಳ ಉಚಿತ ಆನ್ಲೈನ್ ತರಬೇತಿ ಕಾರ್ಯಕ್ರಮಕ್ಕೆ ಆ.19ರಂದು ಚಾಲನೆ ನೀಡಲಾಯಿತು.


ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ.) ವತಿಯಿಂದ ನಡೆಸಲ್ಪಡುವ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ‘ನೆಕ್ಸ್ಟ್ ಲನ್೯’ ವತಿಯಿಂದ ಆಯೋಜಿಸಲಾದ ಈ ತರಬೇತಿ ಕಾರ್ಯಕ್ರಮಕ್ಕೆ ನೆಕ್ಸ್ಟ್ ಲನ್೯ ಟೆಕ್ನಾಲಜೀಸ್ನ ಮುಖ್ಯಸ್ಥ ಸತೀಶ್ ಅವರ ನೇತೃತ್ವವಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಸಿಬಾನಿ ಪಾಂಡಿ ಭಾಗವಹಿಸಿದ್ದರು.


ತರಬೇತಿಯಲ್ಲಿ ವೆಬ್ಸೈಟ್ ನಿರ್ಮಾಣದ ಮೂಲಭೂತ ಅಂಶಗಳ ಜೊತೆಗೆ ಆಧುನಿಕ ವೆಬ್ಸೈಟ್ಗಳನ್ನು ನಿರ್ಮಿಸುವ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. HTML, CSS ಮತ್ತು JavaScript ಬಳಸಿ ವೆಬ್ಸೈಟ್ನ ರಚನೆ, ವಿನ್ಯಾಸ ಹಾಗೂ ಕಾರ್ಯನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆ.


ಇದರೊಂದಿಗೆ React Framework ಮೂಲಕ ಆಧುನಿಕ ಹಾಗೂ ಸಂವಾದಾತ್ಮಕ ಬಳಕೆದಾರ ಸಂಪರ್ಕ ವ್ಯವಸ್ಥೆಗಳನ್ನು ನಿರ್ಮಿಸುವುದು, ದತ್ತಾಂಶ ನಿರ್ವಹಣೆ, ವೆಬ್ಸೈಟ್ಗೆ ಡೇಟಾಬೇಸ್ ಸಂಪರ್ಕಿಸುವ ವಿಧಾನ, Deployment ಹಾಗೂ Hosting ಸೇರಿದಂತೆ ವೆಬ್ ಡೆವಲಪ್ಮೆಂಟ್ ಕ್ಷೇತ್ರದ ಪ್ರಮುಖ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.


ಒಂದು ತಿಂಗಳ ಅವಧಿಯ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಕೋರ್ಸ್ ಶುಲ್ಕವಿಲ್ಲದೆ ವಿದ್ಯಾರ್ಥಿಗಳಿಗೆ ಉಪಯುಕ್ತ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *