ಕಕ್ಯಪದವು: ಆಗಸ್ಟ್ 16ರಂದು ಇಂಟರ್ನ್ಯಾಷನಲ್ ಯಮಾಟೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಸುರತ್ಕಲ್ ಚರ್ಚ್ ಸಭಾಭವನದಲ್ಲಿ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ಶಿಪ್–2026 ಹಾಗೂ ಇಂಡಿಪೆಂಡೆನ್ಸ್ ಕಪ್ ಕರಾಟೆ ಸ್ಪರ್ಧೆ ನಡೆಯಿತು.

ದೇಶದ ವಿವಿಧ ಭಾಗಗಳಿಂದ ಕರಾಟೆ ಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಟಾ ವಿಭಾಗದಲ್ಲಿ 6ನೇ ತರಗತಿಯ ಲವೀಶ್ ಹಾಗೂ ದಿಶಾ ವೈ ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಶ್ರವಣ್, ಆದಿತ್ಯ ಹಾಗೂ ವರುಣ್ ಡಿ. ದ್ವಿತೀಯ ಸ್ಥಾನ ಗಳಿಸಿದರು. 7ನೇ ತರಗತಿಯ ಚಿರಾಗ್ ಎಂ.ಎನ್., ಪ್ರಥಮ್, 6ನೇ ತರಗತಿಯ ಅಭೀಶ್, ಸ್ಪಂದನ, ಶಿವಪ್ರಿಯಾ, ತ್ರಿಶಿಕ ಎಂ.ಎನ್., ವರುಣ್ ಡಿ., 5ನೇ ತರಗತಿಯ ಧನ್ವಿನ್ ನಿಧಿಶ್, 4ನೇ ತರಗತಿಯ ಶಿವಂಶ್ ಶೆಟ್ಟಿ, ದಿಶಾನ್, ಮೇಘನಾ ಪಿ. ಸುವರ್ಣ, ಕೃತಿಕ್, ಚಿರಾಗ್, ಜೆ.ಪಿ. ಆರ್ಯನ್, ಶಮ್ನ ಫಾತಿಮಾ ಹಾಗೂ 2ನೇ ತರಗತಿಯ ದಕ್ಷ್ ಪಿ. ತೃತೀಯ ಸ್ಥಾನ ಪಡೆದರು.

ಕುಮಿಟೆ ವಿಭಾಗದಲ್ಲಿ 6ನೇ ತರಗತಿಯ ಲವೀಶ್, ಅಭೀಶ್, ದಿಶಾ ವೈ., ತ್ರಿಶಿಕ ಎಂ.ಎನ್. ಹಾಗೂ 7ನೇ ತರಗತಿಯ ಚಿರಾಗ್ ಎಂ.ಎನ್. ಪ್ರಥಮ ಸ್ಥಾನ ಪಡೆದರು. 6ನೇ ತರಗತಿಯ ಸ್ಪಂದನ ಹೆಚ್. ಪೂಜಾರಿ ದ್ವಿತೀಯ ಸ್ಥಾನ ಗಳಿಸಿದರು. 7ನೇ ತರಗತಿಯ ಸಮರ್ಥ್, 6ನೇ ತರಗತಿಯ ಶ್ರವಣ್ ಹಾಗೂ 4ನೇ ತರಗತಿಯ ಶಮ್ನ ಫಾತಿಮಾ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದರು.

ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಅಶೋಕ್ ಆಚಾರ್ಯ ಅವರು ತರಬೇತಿ ನೀಡಿದ್ದರು.

ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ವಿಜಯ ಕೆ. ಅಭಿನಂದಿಸಿ, ಮುಂದೆಯೂ ಇದೇ ರೀತಿ ಸಾಧನೆ ಮಾಡುವಂತೆ ಶುಭ ಹಾರೈಸಿದರು.


