Breaking
10 Oct 2026, Sat

ಬೆಸ್ಟ್ ಎಮ್‌ ಎಲ್‌ ಎ ಪುರಸ್ಕಾರ ಪಡೆದ ಹರೀಶ್ ಪೂಂಜಾಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಅಭಿನಂದನೆ

ಬೆಳ್ತಂಗಡಿ: ಬೆಸ್ಟ್ ಎಮ್‌ ಎಲ್‌ ಎ ಪುರಸ್ಕಾರ ಪಡೆದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರನ್ನು ಮಾಲಾಡಿ–ಸೋನಂದೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.

ಶಾಸಕರ ನಿವಾಸಕ್ಕೆ ತೆರಳಿದ ಮಾಲಾಡಿ–ಸೋನಂದೂರು ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪಕ್ಷದ ವಿವಿಧ ಜವಾಬ್ದಾರಿಯಲ್ಲಿರುವ ಮುಖಂಡರು ಹರೀಶ್ ಪೂಂಜಾ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಲಾಡಿ–ಸೋನಂದೂರು ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ವಿವಿಧ ಜವಾಬ್ದಾರಿಗಳ ಪ್ರಮುಖರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *