Breaking
10 Oct 2026, Sat

ಶಾಸಕ ಹರೀಶ್ ಪೂಂಜಾರವರ ಜನ್ಮದಿನ: ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಂದಾರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರ ಜನ್ಮದಿನದ ಅಂಗವಾಗಿ ಹರೀಶ್ ಪೂಂಜಾ ಅಭಿಮಾನಿ ಬಳಗದ ವತಿಯಿಂದ ಬಂದಾರು ಗ್ರಾಮದ ಪೆರ್ಲ–ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶಾಶ್ವತ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶಾಸಕ ಹರೀಶ್ ಪೂಂಜಾ ಅವರಿಗೆ ದೀರ್ಘಾಯುಷ್ಯ, ಆಯುರಾರೋಗ್ಯ ಹಾಗೂ ಸಂಪತ್ತು ಪ್ರಾಪ್ತಿಯಾಗಲಿ. ಮುಂಬರುವ ದಿನಗಳಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವುದರ ಜೊತೆಗೆ ಸಚಿವ ಸ್ಥಾನವೂ ಲಭಿಸಲಿ ಎಂದು ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಂಚಾಲಕ ಲೋಕ್ಷತ್ ಗೌಡ ಅನಿಲ, ಪೆರ್ಲ–ಬೈಪಾಡಿ ಬೂತ್ ಸಮಿತಿ ಕಾರ್ಯದರ್ಶಿ ಲೋಹಿತ್ ಗೌಡ ಸೋನಕುಮೇರು, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಆಡಳಿತ ಮೊಕ್ತೇಸರ ಹರೀಶ್ ಗೌಡ ಕೊಡಿಮಜಲು, ಮಾಜಿ ಬೂತ್ ಕಾರ್ಯದರ್ಶಿ ಲಕ್ಷ್ಮೀಕಾಂತ ಗೌಡ ಕೀಲಾರ್, ನಾರಾಯಣ ಗೌಡ ಪಯ್ಯೋಡಿ, ದೇವಪ್ಪ ಪರ್ಲಾರ್, ಪವನ್ ಒಲಕ್ಕುಡೆ, ಕೇಶವ ಏಕ, ರಂಜಿತ್ ಬಲಿಪೆ, ತೀವರ್ಲೆಸ್ ಬಲಿಪೆ, ಭರತ್ ಕುಕ್ಕಿಲ, ದೀಪಕ್ ಕೀಲಾರ್ ಸೇರಿದಂತೆ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *