ಬಂಟ್ವಾಳ: ಜೈ ಭೀಮ್ ಫ್ರೆಂಡ್ಸ್ ಹಾಗೂ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್ 2026’ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯಿತು.

ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರಹಾಸ ಅರ್ಬಿಗುಡ್ಡೆ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ತಿಕ್ ವಗ್ಗ, ವಸಂತ್, ಸಂದೀಪ್, ಭಾರತೀ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಗೂ ಯುವಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದ ಯಶಸ್ಸಿನಲ್ಲಿ ಯುವಕರ ಒಗ್ಗಟ್ಟು, ಸಂಘಟಕರ ಶಿಸ್ತು ಹಾಗೂ ಉತ್ತಮ ಸಂಯೋಜನೆ ಗಮನ ಸೆಳೆಯಿತು. ಊರಿನ ಹಾಗೂ ಪರಊರಿನ ಸಮಾಜ ಬಾಂಧವರಿಗೆ ಗೌರವ ನೀಡುವ ಮೂಲಕ ಸಂಘಟಕರು ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಸಂದೇಶ ನೀಡಿದರು.

ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಯುವಕರ ಒಗ್ಗಟ್ಟು ಹಾಗೂ ಸಂಘಟನಾ ಮನೋಭಾವ ಮುಂದುವರಿಯಲಿ ಎಂಬುದು ತಾಲೂಕಿನ ಸಮಾಜ ಬಾಂಧವರ ಆಶಯವಾಗಿದೆ.






