Breaking
17 Aug 2026, Mon

ಬಂಟ್ವಾಳ: ನಿವೃತ್ತ ಸೇನಾನಿ ಡಿ. ಶಿವರಾಮ್ ರಾವ್ ಅವರಿಗೆ ಸನ್ಮಾನ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಬಂಟ್ವಾಳ ವಲಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿವೃತ್ತ ಸೇನಾನಿ ಡಿ. ಶಿವರಾಮ್ ರಾವ್ ಬೈರಿಕಟ್ಟೆ ಅವರನ್ನು ಕನ್ಯಾನದ ಭಾರತ ಸೇವಾಶ್ರಮದಲ್ಲಿ ಗೌರವಿಸಲಾಯಿತು.

ಸನ್ಮಾನದ ಬಳಿಕ ಸೇನಾನಿ ಡಿ. ಶಿವರಾಮ್ ರಾವ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ತಮ್ಮ ಅನುಭವ ಹಾಗೂ ದೇಶರಕ್ಷಣೆಯಲ್ಲಿ ಸೈನಿಕನಾಗಿ ನಿರ್ವಹಿಸಿದ ಕರ್ತವ್ಯದ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಭಾರತ ಸೇವಾಶ್ರಮ, ಕನ್ಯಾನದ ಕಾರ್ಯದರ್ಶಿ ಈಶ್ವರ್ ಭಟ್, ವಲಯಾಧ್ಯಕ್ಷ ರಾಜೇಂದ್ರ ಕೆ., ಸೇನಾನಿಯವರ ಧರ್ಮಪತ್ನಿ ಸುನಂದಾ, ಮನೋಹರ ದೇಸಾಯಿ ಬಿಜಾಪುರ, ಅರುಂದತಿ ಬಿಜಾಪುರ, ಮಾಜಿ ಅಧ್ಯಕ್ಷರಾದ ಕುಮಾರಸ್ವಾಮಿ, ದಯಾನಂದ್ ಬಂಟ್ವಾಳ್, ಆನಂದ್ ಯಾನ್, ಹರೀಶ್ ಕುಂದರ್, ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ರವಿಕಲ್ಪನೆ, ಉಪಾಧ್ಯಕ್ಷ ಹರೀಶ್ ನಾಟಿ ಹಾಗೂ ಸದಸ್ಯರಾದ ವಿಕೇಶ್, ಗೋಪಾಲಕೃಷ್ಣ ವಿಟ್ಲ, ವಿವೇಕ್, ಶ್ರೀಕೃಷ್ಣ ಭಟ್ ಯಸ್ ಮತ್ತು ಮೋಹನ್ ದಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *