ಮಂಗಳೂರು: ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಾವೂರಿನ ಐಶ್ವರ್ಯ ರಾಜ್ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆದಿದ್ದಾರೆ.

ಐಶ್ವರ್ಯ ಅವರು ಉರ್ವ ಕೆನರಾ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದ್ದಾರೆ.
ಐಶ್ವರ್ಯ ಅವರ ಸಹೋದರ ಆಶಿಫ್ ರಾಜ್ ಈಗಾಗಲೇ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸೀನಿಯರ್ ಫಸ್ಟ್ ಆಫೀಸರ್ (ಎಸ್‌ಎಫ್‌ಒ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರನ ವೃತ್ತಿಯಿಂದ ಪ್ರೇರಣೆ ಪಡೆದ ಐಶ್ವರ್ಯ ಅವರು ಪೈಲಟ್ ಆಗುವ ಕನಸು ನನಸಾಗಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ಚೈಮ್ಸ್ ಏವಿಯೇಶನ್ ಅಕಾಡೆಮಿಯಲ್ಲಿ ವೃತ್ತಿಪರ ಪೈಲಟ್ ತರಬೇತಿ ಪಡೆದ ಅವರು, ಬಳಿಕ ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಏಕ್ರೋನ್ ಏವಿಯೇಶನ್ ಅಕಾಡೆಮಿಯಲ್ಲಿ ಎ320 ಟೈಪ್ ರೇಟಿಂಗ್ ಸೇರಿದಂತೆ ಕಠಿಣ ವೃತ್ತಿಪರ ತರಬೇತಿ ಪಡೆದು ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಗಳಿಸಿದ್ದಾರೆ.
ಐಶ್ವರ್ಯ ಅವರು ಕಾವೂರು ಗ್ರಾಮದ ಮಂಜಲಕಟ್ಟೆ ನಿವಾಸಿ ರಾಜಾರಾಮ್ ಮತ್ತು ಸುಲತಾ ದಂಪತಿಯ ಪುತ್ರಿ.



