Breaking
22 Mar 2026, Sun

ವಿಧಾನಸೌಧದಲ್ಲಿ ದತ್ತಪೀಠಕ್ಕೆ ಸಂಬಂಧ ಪಟ್ಟಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ದಾಖಲೆ ನೀಡಿದ ರಘು ಸಕಲೇಶಪುರ

ಬೆಂಗಳೂರು: ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಹಿಂದೂ ಮುಖಂಡರು ಹಾಗೂ ಮುಸ್ಲಿಮರ ಅಹವಾಲು ಸ್ವೀಕಾರ ಮಾಡಿದ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾದ ಶ್ರೀ ಜಿ.ಪರಮೇಶ್ವರ್, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣಬೈರೇಗೌಡ, ಇಂಧನ ಸಚಿವ ಕೆ.ಜೆ ಜಾರ್ಜ್ ವಸತಿ ಸಚಿವ ಜಮೀರ್ ಅಹಮದ್, ಕಂದಾಯ ಇಲಾಖೆ ಕಾರ್ಯದರ್ಶಿ, ಇತರೆ ಅಧಿಕಾರಿಗಳು ಅಹವಾಲು ಸ್ವೀಕಾರ ಮಾಡಿದರು.

ಈ ಸಂಧರ್ಭದಲ್ಲಿ ದತ್ತಪೀಠದ ಗುಹೆ ಒಳಗೆ ಹೋಗುವ ಮುಂಭಾಗ ಇರುವ ಕಲ್ಲಿನ ಕಂಬದಲ್ಲಿ ಹಿಂದೂ ಕುರುವುಹುಗಳಿದ್ದು ಇದರ ಮಾಹಿತಿಯನ್ನು ಮಾನ್ಯ ಗೃಹ ಸಚಿವರಿಗೆ ಹಿಂದೂ ಮುಖಂಡ ರಘು ಸಕಲೇಶಪುರ ಪತ್ರದ ಮೂಲಕ ನೀಡಿದರು, ಈ ಸಂಧರ್ಭದಲ್ಲಿ ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *