Breaking
21 Jun 2026, Sun

ಧರ್ಮದ ರಕ್ಷಣೆಗೆ ಹಿಂದೂ ಸಮಾಜ ಒಗ್ಗಟ್ಟಾಗುವ ಅನಿವಾರ್ಯತೆ ಇದೆ : ದೇವಿಪ್ರಸಾದ್ ಶೆಟ್ಟಿ ಕೊಡ್ಮಾಣ್

ಬಂಟ್ವಾಳ :ಸಾವಿರಾರು ವರುಷಗಳ ಇತಿಹಾಸವಿರುವ ಭವ್ಯ ಪರಂಪರೆಯನ್ನು ಹೊಂದಿರುವ ಹಿಂದೂ ಧರ್ಮವು ಅನಾದಿ ಕಾಲದಿಂದಲೂ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತ ಬಂದಿದೆ, ಪ್ರಸ್ತುತ ಕಾಲಘಟ್ಟದಲ್ಲಿಯೂ ಕೂಡ ಅನೇಕ ಸವಾಲುಗಳಿಗೆ ದಿಟ್ಟ ಉತ್ತರ ನೀಡಲು ಹಿಂದೂ ಸಮಾಜವು ಜಾತಿ ಮತ ಪಂತವನ್ನು ಬಿಟ್ಟು ಒಗ್ಗಟ್ಟಾಗುವ ಸಂದರ್ಭ ಬಂದಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಕೊಡ್ಮಾಣ್ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಮಂದಿರದ ಲೋಕಾರ್ಪಣೆ ಪ್ರಯುಕ್ತ ಜ. 19ರಂದು ಆದಿತ್ಯವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಮಾತನಾಡಿದರು.

ಆರ್ಯ ಸಮಾಜ (ರಿ.) ಮಂಗಳೂರು ಇದರ ಅಧ್ಯಕ್ಷ ಹಾಗೂ ವಕೀಲ ದಿನಕರ ಶೆಟ್ಟಿ ಮಾತನಾಡಿ, ಮಠ ಮಂದಿರಗಳು ಹಾಗೂ ಧಾರ್ಮಿಕ ಆಚರಣೆಗಳು ಹಿಂದೂ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಿ, ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದಿನ ತಲೆಮಾರಿಗೆ ಮುಟ್ಟಿಸುವ ಅಗತ್ಯತೆ ಇದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಿ.ಪಿ.ಮಾನವಿಕ್ರಮ ಗುರುಸ್ವಾಮಿ, ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಸ್ಥಾಪಕಾಧ್ಯಕ್ಷ ಸಂತೋಷ್ ಪೊಳಲಿ,ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ,, ಹಿಂದೂ ಮುಖಂಡರಾದ ಸಂದೀಪ್ ಅಂಗ್ಲಮೊಗರು, ಹರೀಶ್ ಮಟ್ಟಿ, ನಾಗೇಶ್ ತೋಕೂರು, ಉದ್ಯಮಿ ಧನರಾಜ್ , ಉಷಾ’ಸ್ ಗ್ರೂಪ್ ಮಾಲಕಿ ಉಷಾ ಮನೋಜ್ ಶರ್ಮ , ಬ್ರಹ್ಮಕಲಶೋತ್ಸವ ಮಹಿಳಾ ಸಮಿತಿ ಅಧ್ಯಕ್ಷೆ ಭವ್ಯ ಪ್ರವೀಣ್ ಬೆಂಜನಪದವು, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಸಿ.ಪಿ.ಮಾನವಿಕ್ರಮ ಗುರುಸ್ವಾಮಿ ಹಾಗೂ ವಕೀಲ ದಿನಕರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಕಿಶೋರ್ ಭಂಡಾರಿ ಬೆಳ್ಳೂರು ಸ್ವಾಗತಿಸಿ, ಧನ್ಯವಾದವಿತ್ತರು.ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.ಅಯ್ಯಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರವೀಣ್ ಬೆಂಜನಪದವು, ಪ್ರ. ಕಾರ್ಯದರ್ಶಿ ಸುಬ್ರಮಣ್ಯ ಭಟ್ ಹಾಗೂ ಬ್ರಹ್ಮಕಲಶ ಸಮಿತಿಯ ಪ್ರ. ಕಾರ್ಯದರ್ಶಿ ಮನೋಜ್ ಶರ್ಮ ಸಹಕರಿಸಿದರು.

ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಮಹಾ ಪೂಜೆ ನಡೆಯಿತು.ನಂತರ ಸ್ಥಳೀಯ ಪ್ರತಿಭೆಗಳ ಹಾಗೂ ಡ್ರೀಮ್ಸ್ ಬಾಯ್ಸ್ ಡಾನ್ಸ್ ಗ್ಯಾಲರಿ ಮಂಗಳೂರು ಇವರಿಂದ “ತುಳುನಾಡ ಕ್ಷೇತ್ರ ಇತಿಹಾಸ”ಗಾನ ನೃತ್ಯ ವೈಭವ ನಡೆಯಿತು

Leave a Reply

Your email address will not be published. Required fields are marked *