Breaking
22 Mar 2026, Sun

ವಿಟ್ಲ ಪಟ್ಟಣ ಪಂಚಾಯತ್ ಬಜೆಟ್ ಪೂರ್ವ ಸಭೆ: ಸಾರ್ವಜನಿಕರಿಂದ ಹತ್ತಾರು ಅಭಿವೃದ್ಧಿ ಕಾರ್ಯಗಳ ಬೇಡಿಕೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತಿಯ 2025-26ನೇ ಸಾಲಿನ ಆಯವ್ಯಯ ಸಿದ್ಧತಾ ಸಭೆ( ಬಜೆಟ್ ಪೂರ್ವ ಸಭೆ )ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಜ. 17ಶುಕ್ರವಾರ ಸಂಜೆ ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಾರದ ಸಂತೆಯ ನಿವೇಶನಕ್ಕೆ ಸಮರ್ಪಕ ರಸ್ತೆ ಮತ್ತು ಮೂಲ ಅವಶ್ಯಕತೆಗಳನ್ನು ಒದಗಿಸಬೇಕು. ಉದ್ಯಾನವನ ನಿರ್ವಹಣೆಯಾಗಬೇಕು. ಗಿಡ ನೆಟ್ಟು ನಿರಂತರ ನಿರ್ವಹಣೆಯಾಗಬೇಕು. ಶೌಚಾಲಯ, ವಿಶಾಲ ಮೈದಾನ ನಿರ್ಮಾಣ ಇತ್ಯಾದಿ ಬೇಡಿಕೆಗಳನ್ನು ಸಾರ್ವಜನಿಕರು ಮುಂದಿಟ್ಟು ಅವುಗಳ ಅನುಷ್ಠಾನಕ್ಕೆ ಆಗ್ರಹಿಸಿದರು.

ಕೊಳವೆಬಾವಿ ನಿಷ್ಕ್ರಿಯವಾದ ಕೂಡಲೇ ಹೊಸ ಕೊಳವೆಬಾವಿ ತೆಗೆದು ಆ ಬಾವಿಗೆ ಹೊಸ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಬೇಕಾಗಿಲ್ಲ. ಮೀಟರ್ ಸ್ಥಳಾಂತರಗೊಳಿಸಬೇಕು. ಆ ಮೂಲಕ ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಬಹುದು. ಪೇಟೆಯಲ್ಲಿರುವ ಶೌಚಾಲಯ ನಿರ್ವಹಣೆಯಾಗಬೇಕು. ಚರಂಡಿ ಹೂಳೆತ್ತುವ ಕಾರ್ಯ ಮಳೆ ಬೀಳುವ ಮುನ್ನ ನಡೆಯಬೇಕು. ಕಂದಾಯ ಇಲಾಖೆಯ ಕಟ್ಟಡ, ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಶೀಘ್ರ ಆರಂಭ ಆಗಬೇಕು ಎಂಬ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಎಸ್., ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರುಣಾಕರ ವಿ., ಸದಸ್ಯರಾದ ಜಯಂತ ಸಿ.ಹೆಚ್, ಅಶೋಕ್ ಕುಮಾರ್ ಶೆಟ್ಟಿ, ಅಬ್ದುಲ್ ರಹಿಮಾನ್ ಹಸೈನಾರ್ , ವಿ.ಕೆ.ಎಂ.ಅಶ್ರಫ್, ವಸಂತ , ಪದ್ಮಿನಿ, ವಿಜಯಲಕ್ಷ್ಮೀ, ಸುನಿತಾ, ಶಾಕಿರಾ, ಲತಾ ಅಶೋಕ್ ಪೂಜಾರಿ, ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಶೆಟ್ಟಿ ಕೊಲ್ಯ, ವರ್ತಕ ಸಂಘದ ಅಧ್ಯಕ್ಷ ಬಾಬು ಕೊಪ್ಪಳ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ರಜತ್ ಆಳ್ವ , ವಿಟ್ಲ ಗ್ರಾಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ರಾಮದಾಸ್ ಶೆಣೈ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *