Breaking
29 Sep 2026, Tue

ಬಿ.ಸಿ.ರೋಡ್‌ನಲ್ಲಿ ಧರ್ಮಜ್ಯೋತಿ ನವಜೀವನ ಸಮಿತಿಯಿಂದ ಸ್ವಚ್ಛತಾ ಶ್ರಮದಾನ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ತಾಲೂಕು ಹಾಗೂ ಜನಜಾಗೃತಿ ವೇದಿಕೆ ಬಿ.ಸಿ.ರೋಡ್ ವಲಯದ ವತಿಯಿಂದ ರಚಿಸಲಾದ ‘ಧರ್ಮಜ್ಯೋತಿ’ ನವಜೀವನ ಸಮಿತಿ ವತಿಯಿಂದ ಬಿ.ಸಿ.ರೋಡ್‌ನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.

ನವಜೀವನ ಸಮಿತಿಯ ಸದಸ್ಯರು ಹಾಗೂ ಬಿ.ಮೂಡ ಒಕ್ಕೂಟದ ಸಂಘದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಬಳಿಕ ನವಜೀವನ ಸಮಿತಿ ವತಿಯಿಂದ ಶ್ರೀ ದೇವರಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ವಲಯದ ಮೇಲ್ವಿಚಾರಕ ಗಿರೀಶ್ ಹಾಗೂ ನವಜೀವನ ಸಮಿತಿ ಪೋಷಕಿ ಆಶಾಲತಾ ದಿನೇಶ್ ಶೆಟ್ಟಿ ಉಪಸ್ಥಿತರಿದ್ದು, ಸಹಕರಿಸಿದರು.

Leave a Reply

Your email address will not be published. Required fields are marked *