ಬಂಟ್ವಾಳ: ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕದ ಜುಲೈ ತಿಂಗಳ ಮಾಸಿಕ ಸಭೆ ಹಾಗೂ 19ನೇ ವರ್ಷದ “ಆಟಿಡೊರ ತಮ್ಮನ ಲೇಸ್” ಕಾರ್ಯಕ್ರಮವು ಆಗಸ್ಟ್ 2ರ ಭಾನುವಾರ ಸ್ಪರ್ಶ ಕಲಾ ಮಂದಿರದಲ್ಲಿ ಅಧ್ಯಕ್ಷ ವೀರ್ ರಾಜೇಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರು ಹಾಗೂ ವಿಶ್ರಾಂತ ಕುಲಸಚಿವರಾದ ಡಾ. ಬಿ.ಪಿ. ಸಂಪತ್ ಕುಮಾರ್ ಜೈನ್ ಉದ್ಘಾಟಿಸಿದರು. ಅವರು ಹಿಂದಿನ ಕಾಲದ ಸಾಂಪ್ರದಾಯಿಕ ಆಹಾರ ಪದ್ಧತಿ, ಅದರ ಆರೋಗ್ಯಕರ ಮಹತ್ವ ಹಾಗೂ ಕವಿಗಳ ವರ್ಣನೆಗಳ ಕುರಿತು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಸಾಂಕೇತಿಕವಾಗಿ ಸಾಂಪ್ರದಾಯಿಕ ತಿಂಡಿಗಳ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಅವರು ಲೇಸ್‌ನ ತಿನಿಸುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವೀರ್ ಜಯರಾಜ್ ಕಂಬಳಿ ನಿರ್ದೇಶಕರು ಭಾ. ಜೈ . ಮಿಲನ್ ಮಂಗಳೂರು ವಿಭಾಗ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೀರ್ ಸುಭಾಷ್ ಚಂದ್ರ ಜೈನ್ ಕಾರ್ಯದರ್ಶಿ ಭಾ. ಜೈ. ವಿಲನ್ ಮಂಗಳೂರು ವಿಭಾಗ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶುಭ ಹಾರೈಸಿದರು.

ಪ್ರತಿ ವರ್ಷವೂ ನೀಡುವಂತಹ ಈ ವರ್ಷದ ಮಿಲನೋತ್ತಮ ಪ್ರಶಸ್ತಿಯನ್ನು ವೀರ್ ಭರತ್ ಜೈನ್ ಪಾಪುದಡ್ಕ ಇವರಿಗೆ ನೀಡಲಾಯಿತು. ಇವರ ಮಿಲನೋತ್ತಮ ಪ್ರಶಸ್ತಿಯನ್ನು ಭರತ್ ಕುಮಾರ್ ವೇಣೂರು ವಾಚಿಸಿದರು.

ಅತಿಥಿಗಳ ಪರಿಚಯವನ್ನು ವೀರಾಂಗನೆ ಸ್ವಪ್ನ ಚಂದ್ರಪ್ರಭ ಇವರು ನೆರವೇರಿಸಿಕೊಟ್ಟರು, ವೀರ್ ರಾಜೇಂದ್ರ ಜೈನ್ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು, ಮಾಸಿಕ ಸಭೆಯ ಅದೃಷ್ಟ ವ್ಯಕ್ತಿಗಳ ಚೀಟುಗಳನ್ನು ಎತ್ತುವ ಕಾರ್ಯಕ್ರಮವನ್ನು ಪ್ರವೀಣ್ ಬಸ್ತಿ ಪಡ್ಪು, ಇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 68 ಜೈನ ಪಾರಂಪರಿಕ ಬಗೆಯ ವಿವಿಧ ತಿಂಡಿ, ಕಷಾಯ ಚಟ್ನಿಗಳನ್ನುಎಲ್ಲಾ ವೀರ್ ವಿರಾಂಗನೆಯರು ಮಾಡಿ ತಂದಿದ್ದರು, ಆಗಮಿಸಿದ ಎಲ್ಲಾ ಅತಿಥಿಗಳಿಗೆ ಉಣಬಡಿಸಿದರು. ವೀರ್ ಉದಯ ಕುಮಾರ್ ಮದ್ವ ಪ್ರಾರ್ಥನೆಯನ್ನು ನೆರವೇರಿಸಿದರು.

ಜೈನ್ ಮೆಡಿಕೋ ಸರ್ಜಿಕಲ್ ಲ್ಯಾಬ್ ಸಂಸ್ಥೆಯ ಸಿಬ್ಬಂದಿಗಳು ಆಗಮಿಸಿದ ಎಲ್ಲರ ರಕ್ತದ ಗುಂಪು ಪರಿಶೀಲನೆ, ರಕ್ತದ ಒತ್ತಡ, ಬ್ಲಡ್ ಶುಗರ್ ಚೆಕ್ ಕ್ಯಾಂಪ್ ಉಚಿತವಾಗಿ ನಡೆಸಿ, ಎಲ್ಲರ ಶ್ಲಾಘನೆಗೆ ಪಾತ್ರವಾದರು.

ಉಪಾಧ್ಯಕ್ಷರಾದ ವೀರ್ ಹರ್ಷರಾಜ್ ಬಳ್ಳಾಲ್ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿ, ರಾಜ್ಯದಾದ್ಯಂತ ನಡೆಯುವ ಸದಸ್ಯತ್ವ ನೋಂದಣಿ ಅಭಿಯಾನದ ಅವಶ್ಯಕತೆಯನ್ನು ಸಭೆಯಲ್ಲಿ ವಿವರಿಸಿದರು.

ಕಾರ್ಯದರ್ಶಿ ಜಯಕೀರ್ತಿ ಇಂದ್ರ ಧನ್ಯವಾದ ಕೋರಿದರು. ಕಾರ್ಯಕ್ರಮವು ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.


