ಪುದುವೆಟ್ಟು: ಹಿಂದೂ ಸೇವಾ ಸಮಿತಿ ಪುದುವೆಟ್ಟು ವತಿಯಿಂದ ಶ್ರೀ ಓಂ ಶಕ್ತಿ ಭಜನಾ ಮಂದಿರದಲ್ಲಿ ಲೋಕ ಕಲ್ಯಾಣಾರ್ಥವಾಗಿ 108 ತೆಂಗಿನಕಾಯಿ ಗಣಹೋಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗವಹಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪುದುವೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಗೌಡ, ಪುದುವೆಟ್ಟು ಶಕ್ತಿ ಕೇಂದ್ರ ಪ್ರಮುಖ ಪೂರ್ಣಾಕ್ಷ ಬಾಯಿತ್ಯಾರು, ಶ್ರೀ ಓಂ ಶಕ್ತಿ ಭಜನಾ ಮಂದಿರದ ಅಧ್ಯಕ್ಷ ಚೇತನ್ ಮುಚ್ಚಾರು, ಮೀಯಾರು ಶ್ರೀ ವನದುರ್ಗ ದೇವಸ್ಥಾನದ ಮಾಜಿ ಅಧ್ಯಕ್ಷ ನಿತ್ಯಾನಂದ ಗೌಡ, ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಅಡ್ಯ, ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ ಡೆಚ್ಚಾರು, ಬೆನಕ ಕನ್ಸ್ಟ್ರಕ್ಷನ್‌ನ ಗಣೇಶ್ ಗೌಡ ಉಜಿರೆ, ಧರ್ಮಸ್ಥಳ ಸಿಎ ಬ್ಯಾಂಕ್ ನಿರ್ದೇಶಕ ಪ್ರಸನ್ನ ಹೆಬ್ಬಾರ್, ದೇವಣ್ಣ ಗೌಡ ಬೇರಿಕೆ, ದೇವಣ್ಣ ಗೌಡ ಮುಚ್ಚಾರು, ಧನ್ಯಕುಮಾರ್ ಭಂಡಾರಿ, ದಾಮೋದರ ಗೌಡ ಮುಜರ್‌ದಡ್ದ್, ಚಂದ್ರಹಾಸ ಮುಚ್ಚಾರು, ಶಶಿಧರ್ ಗುಂಪಕಲ್ಲು, ದಿವಾಕರ ಗೌಡ ಮುಚ್ಚಾರು, ಹರೀಶ್ ಗುಂಪಕಲ್ಲು, ಪ್ರಮೋದ್ ದರ್ಖಾಸ್, ಗಣೇಶ್ ನೆರೋಲ್ದಪಲ್ಕೆ, ಸೇವಾ ಪ್ರತಿನಿಧಿಗಳಾದ ಹರಿಣಾಕ್ಷಿ ಕೇರ್ಯ ಹಾಗೂ ಚೈತ್ರ ಕೇರ್ಯ ಸೇರಿದಂತೆ ಹಲವು ಗಣ್ಯರು, ಸಮಿತಿ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.






