ಬಂಟ್ವಾಳ: ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ ಇದರ 2026-27ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 27ರಂದು ಪಾಂಗಲ್ಪಾಡಿಯ ಶ್ರೀ ದುರ್ಗಾ ಯಾತ್ರಿ ನಿವಾಸದಲ್ಲಿ ನಡೆಯಿತು.
2026-27ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಲಾದ್ರೂ ಮೀನೇಜಸ್, ಕಾರ್ಯದರ್ಶಿಯಾಗಿ ಲಯನ್ ಸುಧೀರ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಲಯನ್ ಪ್ರಕಾಶ್ಚಂದ್ರ ಆಳ್ವಾ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಅಧಿಕಾರಿಯಾಗಿ ಲಯನ್ . ಶ್ರೀನಿವಾಸ್ ಪೂಜಾರಿ ಬಂಟ್ವಾಳ ಹಾಗೂ ವಲಯ ಅಧ್ಯಕ್ಷರಾದ ಲಯನ್. ಉಮೇಶ್ ಆಚಾರ್ಯ ಬಂಟ್ವಾಳ ಹಾಗೂ ಮುಖ್ಯ ಅತಿಥಿಗಳಾಗಿ ನೆಲ್ವೀಸ್ಟರ್ ಪೀಂಟೊ ನೈನಾಡು ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರು ಹಾಗೂ ಸದಸ್ಯರು, ಲಯನ್ಸ್ ಕ್ಲಬ್ ಲೊರೆಟ್ಟೊ ಅಗ್ರಾರ್ ಇದರ ಅಧ್ಯಕ್ಷರು ಹಾಗೂ ಸದಸ್ಯರು , ಲಯನ್ಸ್ ಕ್ಲಬ್ ಮಾಣಿ ಇದರ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಹಿರಿಯರಾದ ಅಮ್ಮು ರೈ ಹರ್ಕಾಡಿ, ಚೆನ್ನೈತೋಡಿ, ಗ್ರಾಮ ಪಂಚಾಯಿತ್ ಮಾಜಿ ಸದಸ್ಯರಾದ ಅನಂತ ಪೈ ವಾಮದಪದವು ಹಾಗೂ ಕೆಥೋಲಿಕ್ ಸಭಾ ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಅಲ್ಪೋನ್ಸ್ ಫೆರ್ನಾಂಡಿಸ್, ಊರ ಗಣ್ಯರು ಉಪಸ್ಥಿತರಿದ್ದರು.

ಈ ಪದಗ್ರಹಣ ಸಮಾರಂಭದಲ್ಲಿ ಹೊಸ ಸದಸ್ಯರಾಗಿ ಶ್ರೀ ನೆಲ್ವೀಸ್ಟಾರ್ ಗ್ಲೇನ್ ಪೀಂಟೊ ನೈನಾಡು, ಜೋಸ್ಟನ್ ಲೋಬೊ ಕರಿಮಲೆ ವಾಮದಪದವು , ಪ್ರಕಾಶ್ ಸಿಕ್ವೇರಾ ಗುರುಮೇರ್ ಬಸವನ ಬೈಲ್ ಲಯನ್ಸ್ ವಾಮದಪದವು ಪ್ರಕ್ರತಿ ಕ್ಲಬ್ ಗೆ ಸೇರ್ಪಡೆಗೊಂಡರು.

ಬಡ ಕುಟುಂಬಗಳಿಗೆ ಸಹಾಯಹಸ್ತದ ರೂಪದಲ್ಲಿ ತಿಂಗಳ ದಿನಸಿ ಸಾಮಾಗ್ರಿ ಹಾಗೂ ಸಹಾಯಧನ ವಿತರಿಸಲಾಯಿತು.


