Breaking
20 Sep 2026, Sun

ಉಪ್ಪಿನಂಗಡಿ: ನಿಂತಿದ್ದ ಟಿಪ್ಪರ್‌ಗೆ ಕಾರು ಢಿಕ್ಕಿ; 4 ವರ್ಷದ ಮಗು ಸೇರಿ ಐವರಿಗೆ ಗಾಯ

ಉಪ್ಪಿನಂಗಡಿ: ಹೆದ್ದಾರಿ ಬದಿ ನಿಂತಿದ್ದ ಟಿಪ್ಪರ್‌ನ ಹಿಂಬದಿಗೆ ಕಾರೊಂದು ಢಿಕ್ಕಿಯಾಗಿ 4 ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಪೆರ್ನೆಯ ಮೈರಕಟ್ಟೆಯಲ್ಲಿ ಜು.28ರಂದು ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕ ಫರಂಗಿಪೇಟೆ ನಿವಾಸಿ ಮೊಹಮ್ಮದ್ ಫಾರೂಕ್ (31) ಹಾಗೂ ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ (25), ಜುಲೈಕಾ (52), ಮಹಮ್ಮದ್ ಅಫ್ವಾನ್ (15) ಮತ್ತು ಮಹಮ್ಮದ್ ಇಲ್ಹಾನ್ (4) ಗಾಯಗೊಂಡಿದ್ದಾರೆ.

ಫರಂಗಿಪೇಟೆಯಿಂದ ಉಪ್ಪಿನಂಗಡಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೈರಕಟ್ಟೆ ಬಳಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ಗೆ ಕಾರು ಹಿಂಬದಿಯಿಂದ ಢಿಕ್ಕಿಯಾಗಿದೆ.

ಘಟನೆಯ ಕುರಿತು ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *