ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ: ಕವಿಗೋಷ್ಠಿ- ವಾಚನ-ಗಾಯನ- ಕುಂಚ ಕಾರ್ಯಕ್ರಮ

ವಿಟ್ಲ: ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ-ಗಾಯನ- ಕುಂಚ ಕಾರ್ಯಕ್ರಮ ನಡೆಯಿತು.

ಕವಿಗೋಷ್ಠಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮುಳಿಯ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು.ಆಶಯ ನುಡಿ ವ್ಯಕ್ತಪಡಿಸಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಸಾಹಿತಿಗಳು ಸೃಜನಶೀಲ ಬರಹಗಳಿಗೆ ಒತ್ತು ನೀಡಬೇಕಾಗಿದೆ. ತನ್ನ ಬರಹವನ್ನು ಮೆಚ್ಚುಗೆ ವ್ಯಕ್ತಪಡಿಸಬೇಕೆಂಬ ತುಂಬಿದಂತೆ ಇತರ ಕವಿಗಳ ಸಾಹಿತ್ಯವನ್ನು ಮೆಚ್ಚುವ ಹೃದಯ ವೈಶಾಲ್ಯತೆ ಇರಬೇಕೆಂದು ಆಶಿಸಿದರು.

ಕವಿಗೋಷ್ಠಿಯಲ್ಲಿ ಕವಿಗಳಾದ ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ದಾ.ನಾ.ಉಮಾಣ್ಣ ಕೊಕ್ಕಪುಣಿ, ಗೀತಾ ಎಸ್.ಕೊಂಕೋಡಿ, ರವೀಂದ್ರ(ಕಲಾಪ್ರಿಯ) ಕುಕ್ಕಾಜೆ, ಗಣೇಶ ಪ್ರಸಾದ್ ಪಾಂಡೇಲು, ಅಶೋಕ್ ಕಡೇಶ್ವಾಲ್ಯ, ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಅಬೂಬಕ್ಕರ್ ಅಮ್ಮುಂಜೆ, ಪ್ರತಿಮಾ ತುಂಬೆ, ಎಂ.ಡಿ.ಮಂಚಿ ಸ್ವರಚಿತ ಕವನಗಳನ್ನು ವಾಚಿಸಿದರು.

ಪ್ರವೀಣ್ ಜಯ ವಿಟ್ಲ, ಧರಣ್ ಮಾಣಿ, ಯೋಗೀಶ್ ಆಳ್ವ ಪುದ್ದೊಟ್ಟು, ಕಾವ್ಯ ಶ್ರೀ ಗಡಿಯಾರ, ತಂಡದಿಂದ ಗಾಯನ ಪ್ರಸ್ತುತಗೊಂಡಿತು.ಬಾಲಕೃಷ್ಣ ಶೆಟ್ಟಿ ಖಂಡಿಗ, ತಾರಾನಾಥ್ ಕೈರಂಗಳ, ಮುರಳಿ ಕೃಷ್ಣ ರಾವ್, ಮುರಳೀಧರ ಆಚಾರ್ಯ ಕುಂಚದ ಮೂಲಕ ಭಾವ ಮೂಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಪೂವಪ್ಪ ನೇರಳಕಟ್ಟೆ, ಇರಾ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ,‌ ಪತ್ರಕರ್ತ ಲತೀಫ್ ನೇರಳಕಟ್ಟೆ, ಶಿಕ್ಷಕ ದಾಮೋದರ ಕಾರ್ಯ ಉಪಸ್ಥಿತರಿದ್ದರು.ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮೆಲ್ಕಾರ್ ವಂದಿಸಿದರು.

Leave a Reply

Your email address will not be published. Required fields are marked *