Breaking
24 Jun 2026, Wed

ಮಾದಕ ವಸ್ತು ಸೇವನೆ ಆರೋಪ – ಮೂರು ಮಂದಿ ಪೊಲೀಸರ ವಶಕ್ಕೆ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ, ಕಾವೂರು ಜ್ಯೋತಿನಗರದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಬೆರೆಸಿದ ಸಿಗರೇಟ್ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ಆರೋಪದ ಮೇಲೆ ಕುಂಜತ್ತಬೈಲು ನಿವಾಸಿ ರಾಜೇಶ್ (29) ಅವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.


ಇನ್ನೊಂದು ಪ್ರಕರಣದಲ್ಲಿ, ಮಹಾಕಳಿಪಡ್ಪು ಸಮೀಪದ ಮೈದಾನದಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಸಾದ್ (24) ಹಾಗೂ ಮೈಸೂರಿನ ಮಹಮ್ಮದ್ ಸುನೈನ್ ಪಿ.ಆರ್. (20) ಅವರನ್ನು ಪಾಂಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *