Breaking
25 Sep 2026, Fri

ಮಕ್ಕಳಿಗೆ ಮದುವೆಗೆ ಕನ್ಯೆ ಸಿಗದೆ ಮನನೊಂದು ರೈತ ಆತ್ಮಹತ್ಯೆ

ಧಾರವಾಡ: ಮಕ್ಕಳಿಗೆ ಮದುವೆಗೆ ಕನ್ಯೆ ಸಿಗದ ಹಿನ್ನೆಲೆಯಲ್ಲಿ ಮನನೊಂದು ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಂಗಪ್ಪ ಫಕ್ಕೀರಪ್ಪ ಭೋಸಲೆ (55) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಮೂವರು ಗಂಡು ಮಕ್ಕಳಿದ್ದು, ಮೂವರಿಗೂ ಇನ್ನೂ ಮದುವೆಯಾಗಿರಲಿಲ್ಲ. ಸಾಕಷ್ಟು ಕನ್ಯೆ ನೋಡಿದರೂ ಯಾವುದೂ ಹೊಂದಾಣಿಕೆಯಾಗಿರಲಿಲ್ಲ ಎನ್ನಲಾಗಿದೆ.

ಈ ಕಾರಣದಿಂದ ಮನನೊಂದಿದ್ದ ಅವರು ಹೊಲದಲ್ಲಿನ ಬನ್ನಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರವಿವಾರ ಹೊಲಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದ ಗಂಗಪ್ಪ ಅವರು ಮನೆಗೆ ಮರಳಿರಲಿಲ್ಲ. ಸೋಮವಾರ ಅವರ ಶವ ಪತ್ತೆಯಾಗಿದೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *