Breaking
19 Sep 2026, Sat

ಅಮ್ಟಾಡಿ ಪ್ರಾ.ಕೃ.ಪ.ಸ. ಸಂಘ ದ ಅಧ್ಯಕ್ಷರಾಗಿ  ಮಲ್ಲಿಕಾ ಶೆಟ್ಟಿ ಪುನರಾಯ್ಕೆ

ಬಂಟ್ವಾಳ: ತಾಲೂಕಿನ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ 13 ಮಂದಿ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ನೂತನ ಅಧ್ಯಕ್ಷರಾಗಿ ಮಲ್ಲಿಕಾ ವಿ.ಶೆಟ್ಟಿಅವರು ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ರಾಯನ್ ಸಚಿನ್ ರೊಡ್ರಿಗಸ್ ಅವರು ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಮಂಗಳೂರು ಸಹರ್ಕಾ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಽಕ್ಷಕ ಕೆ.ನಾಗೇಂದ್ರ ಅವರು ಚುನಾವಣಾಽಕಾರಿಯಾಗಿದ್ದು ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ಅಜಯ್ ಕುಮಾರ್ ಅಜಿಲ ಹಾಗೂ ಸಿಬಂದಿ ವರ್ಗ ಸಹಕರಿಸಿದರು.

ನಿರ್ದೇಶಕರಾಗಿ ನರಸಿಂಹ ಹೊಳ್ಳ ಹೊಳ್ಳರ ಬಲು, ಆಲ್ವಿನ್ ವಿನಯ್ ಲೋಬೊ ಕಿನ್ನಿಬೆಟ್ಟು, ಕಮಲಾಕ್ಷ ಅಮ್ಟಾಡಿ, ವೀಣಾ ಡಿಸೋಜ ಬಾಂಬಿಲ, ತುಕಾರಾಮ ಉದಲೆ ಕೋಡಿ, ಕಮಲಾ ಕೆಂಪುಗುಡ್ಡೆ, ಯಶವಂತ ಅಡಪ ಕುರಿಯಾಳ, ಎಡ್ವರ್ಡ್ ಆಲ್ವಿನ್ ಫೆರ್ನಾಂಡಿಸ್ ಪೆದಮಲೆ,ಹರೀಶ್ ಶೆಟ್ಟಿ ಪಡು, ಬಬಿತಾ ಕೋಟ್ಯಾನ್ ಅಮ್ಟಾಡಿ, ರೋಶನ್ ಪಿಂಟೋ ಮೂವ ಅವರು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *