Breaking
18 Jun 2026, Thu

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ

ಮಂಗಳೂರು: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ನಗರದ ಕೆಪಿಟಿ ಸಮೀಪದ ಎಸ್.ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಬಳಿಕ ನಡೆದ ಚುನಾವಣೆಯಲ್ಲಿ 2026–28ನೇ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷರಾಗಿ ಶ್ರೀ ಮುರಳಿ ಹೊಸಮಜಲು ಪುನರಾಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ವಿ.ಎಂ. ಸತೀಶನ್ ಅವರು ಮತ್ತೆ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಶ್ರೀ ಅಜಯಕುಮಾರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶ್ರೀಮತಿ ವಾಸಂತಿ ನಾಯರ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಂಜು ಅಜಿತ್ ಹಾಗೂ ಜತೆ ಖಜಾಂಚಿಯಾಗಿ ರವೀಂದ್ರನಾಥ್ ನೇಮಕಗೊಂಡಿದ್ದಾರೆ.

ಬೋರ್ಡ್ ಸದಸ್ಯರಾಗಿ ಶ್ರೀ ವಿಜಯಕುಮಾರ್, ಎಂ.ವಿ. ರಾಜನ್ ಹಾಗೂ ಎ.ಎಸ್. ಮೋಹನ್ ಆಯ್ಕೆಯಾಗಿದ್ದು, ಸಮಿತಿ ಸದಸ್ಯರಾಗಿ ಶ್ರೀ ಜೋತಿಷ್ ಕುಮಾರ್, ಶ್ರೀಮತಿ ಜಯಲಕ್ಷ್ಮೀ ಚಂದ್ರಮೋಹನ್, ಶ್ರೀ ಮಣಿಕಂಠನ್, ಶ್ರೀ ವಿನೋದ್ ರಾಜ್, ಹರೀಶ್ ಗೋವಿಂದ್, ದೇವರಾಜ್ ಹಾಗೂ ವಿನಯನ್ ನಾಯರ್ ಆಯ್ಕೆಯಾದರು.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶ್ರೀಮತಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀಜಾ ನಂಬಿಯಾರ್ ಹಾಗೂ ಖಜಾಂಚಿಯಾಗಿ ಶ್ರೀಮತಿ ಗೋಪಿಕಾ ರಾಣಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಭಾವಿ ಜಯಕುಮಾರ್ ಮತ್ತು ಜತೆ ಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕದ ಸಜಿಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್ದಾಸ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *