ಸಿದ್ದಕಟ್ಟೆ: ದೇಶದಲ್ಲಿನ ಖಾಸಗಿ ಕ್ಷೇತ್ರದ ಕಂಪೆನಿ ಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ದೊರಕುವಂತಗಲೂ ಈಗಾಗಲೇ ನೀಡುತ್ತಿರುವ 21 ಸಾವಿರ ಮಾಸಿಕ ವೇತನ ಶ್ರೇಣಿ ಯನ್ನು 30-35 ಸಾವಿರ ತನಕ ಏರಿಕೆ ಮಾಡುವಂತೆ ಕೇಂದ್ರ ಕಾರ್ಮಿಕ ಸಚಿವರಿಗೆ ಶಿಪಾರಸು ಮಾಡಲು ಕರಾವಳಿ ಜಿಲ್ಲೆಗಳ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಮನವಿ ಮಾಡುವ ಮೂಲಕ ವಿನಂತಿ ಮಾಡಿದ್ದಾರೆ.
ದೇಶದ ಖಾಸಗಿ ಕ್ಷೆತ್ರದ ಕಂಪೆನಿ ಗಳಲ್ಲಿ ಕೋಟ್ಯಂತರ ಉದ್ಯೋಗಿಗಳು ಮತ್ತು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದೂ ಇವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಇ. ಎಸ್. ಐ. ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುತ್ತಿರುವುದರಿಂದ ಆಕಸ್ಮಿಕ ಮತ್ತು ಆಸಹಜ ಕಾಯಿಲೆಗಳಿಂದ ಕಷ್ಟದಲ್ಲಿರುವ ಕಾರ್ಮಿಕರಿಗೆ ತುಂಬಾ ಪ್ರಯೋಜನವಾಗುತ್ತಿದೆ.
2015 ರವರೆಗೆ ಇ.ಎಸ್.ಐ. ಸೌಭ್ಯ ಪಡೆಯುವರೇ ವೇತನ ಮಿತಿ 15 ಸಾವಿರಕ್ಕೆ ನಿಗದಿಗೊಳಿಸಲಾಗಿತ್ತು. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರಕಾರ 2016 ರಲ್ಲಿ ಮಾಸಿಕ ವೇತನ ಶ್ರೇಣಿಯನ್ನು 21 ಸಾವಿರಕ್ಕೆ ಏರಿಕೆ ಮಾಡಿ ಕೋಟ್ಯಾಂತರ ಕಾರ್ಮಿಕರಿಗೆ ನೆರವು ಒದಗಿಸಲಾಗಿತ್ತು.ಪ್ರಸ್ತುತ ಖಾಸಗಿ ಕಂಪೆನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಮತ್ತು ಕಾರ್ಮಿಕರಿಗೆ ಉದ್ಯೋಗದಲ್ಲಿ ಭಡ್ತಿ ನೀಡುತ್ತಿರುವುದರಿಂದ ಹಾಗೂ ಇನ್ನಿತರ ಕಾರಣಗಳಿಂದ ವೇತನ ಏರಿಕೆ ಮಾಡಿರುವುದರಿಂದ ಗರಿಷ್ಟ ಪ್ರಮಾಣದ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಸೇರಿ ಮಾಸಿಕ 30-35 ಸಾವಿರ ವೇತನ ಲಭಿಸುತ್ತಿರುವುದರಿಂದ 21 ಸಾವಿರ ಮೇಲ್ಪಟ್ಟ ವೇತನ ಶ್ರೇಣಿಯನ್ನು ಪಡೆಯುವ ಖಾಸಗಿ ಕ್ಷೇತ್ರದ ಉದ್ಯೋಗಿಗಳು ಮತ್ತು ಕಾರ್ಮಿಕರು ಇ.ಎಸ್.ಐ ಸೌಲಭ್ಯ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.ಆದುದರಿಂದ ಬಡ ಕಾರ್ಮಿಕರಿಗೆ ಮತ್ತು ಖಾಸಗಿ ಉದ್ಯೋಗಿಗಳ ಕುಟುಂಬಗಳಿಗೆ ಇ.ಎಸ್.ಐ ಸೌಲಭ್ಯ ಪಡೆಯುವಂತಾಗಲು ಮಾಸಿಕ ವೇತನ ಶ್ರೇಣಿಯನ್ನು ರೂ. 35 ಸಾವಿರಕ್ಕೆ ಏರಿಕೆ ಮಾಡಲು ಕೇಂದ್ರ ಕಾರ್ಮಿಕ ಸಚಿವರಿಗೆ ಶಿಫಾರಸು ಮಾಡಬೇಕೆಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಪ್ರಭಾಕರ ಪ್ರಭು ಮನವಿ ಮೂಲಕ ವಿನಂತಿಸಿದ್ದಾರೆ.