Breaking
17 Jun 2026, Wed

ಜೂ. 19 ಸಿದ್ದಕಟ್ಟೆ – ಕರ್ಪೆ ಶ್ರೀ ಧರ್ಮ ಅರಸು ಉಳ್ಳಾಯ ಹಾಗೂ ಶ್ರೀ ಕೊಡಮಣಿತ್ತಾಯ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ

ಸಿದ್ದಕಟ್ಟೆ : ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಮಾಡದಬೆಟ್ಟ ಶ್ರೀ ಧರ್ಮ ಅರಸು ಉಳ್ಳಾಯ ಮತ್ತು ಶ್ರೀ ಕೊಡಮಣಿತ್ತಾಯ ಮೂಲಸ್ಥಾನ ಕರ್ಪೆ, ಶ್ರೀ ಧರ್ಮ ಅರಸು ಉಳ್ಳಾಯ ಹಾಗೂ ಶ್ರೀ ಕೊಡಮಣಿತ್ತಾಯ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮವು ಜೂನ್ 19, 2026ರಂದು ಶುಕ್ರವಾರ ಬೆಳಿಗ್ಗೆ 10.09 ಗಂಟೆಗೆ ನಡೆಯಲಿದೆ.

ಶ್ರೀ ಕ್ಷೇತ್ರದ ಐ. ಕೃಷ್ಣ ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿ, ಶ್ರೀ ಧರ್ಮ ಅರಸು ಉಳ್ಳಾಯ ಹಾಗೂ ಶ್ರೀ ಕೊಡಮಣಿತ್ತಾಯ ದೈವಗಳ ಆಶೀರ್ವಾದ ಮತ್ತು ಕೃಪೆಗೆ ಪಾತ್ರರಾಗುವಂತೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ದುರ್ಗಾದಾಸ್ ಶೆಟ್ಟಿ ಮಾವಂತೂರು, ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ಗಣೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *